ಸ್ಪೆಲ್ಲಿಂಗ್‌ ಬೀ: ಸತತ 13ನೇ ಬಾರಿಗೆ ಭಾರತೀಯ ಸಮುದಾಯದವರಿಗೆ ಪ್ರಶಸ್ತಿ

7

ಸ್ಪೆಲ್ಲಿಂಗ್‌ ಬೀ: ಸತತ 13ನೇ ಬಾರಿಗೆ ಭಾರತೀಯ ಸಮುದಾಯದವರಿಗೆ ಪ್ರಶಸ್ತಿ

Published:
Updated:
ಸ್ಪೆಲ್ಲಿಂಗ್‌ ಬೀ: ಸತತ 13ನೇ ಬಾರಿಗೆ ಭಾರತೀಯ ಸಮುದಾಯದವರಿಗೆ ಪ್ರಶಸ್ತಿ

ವಾಷಿಂಗ್ಟನ್‌: ಭಾರತ ಮೂಲದ ವಿದ್ಯಾರ್ಥಿನಿ 12 ವರ್ಷದ ಅನನ್ಯಾ ವಿನಯ್‌ ಈ ವರ್ಷದ ಪ್ರತಿಷ್ಠಿತ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಈ ಮೂಲಕ ಸತತ 13ನೇ ಬಾರಿಗೆ ಭಾರತೀಯ ಸಮುದಾಯದವರಿಗೆ ಪ್ರಶಸ್ತಿ ದೊರಕಿದಂತಾಗಿದೆ.

ಕ್ಯಾಲಿಫೋರ್ನಿಯಾದ ಫ್ರೆಸ್ನೊದಲ್ಲಿ ಆರನೇ ತರಗತಿಯಲ್ಲಿ  ಓದುತ್ತಿರುವ ಅನನ್ಯಾ 90ನೇ ಆವೃತ್ತಿಯ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ 40 ಸಾವಿರ ಡಾಲರ್‌ (₹25.77 ಲಕ್ಷ) ಹಾಗೂ ಟ್ರೋಫಿ ಗೆದ್ದಿದ್ದಾಳೆ.

291 ವಿದ್ಯಾರ್ಥಿಗಳಿದ್ದ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು, ಅನನ್ಯಾ ಹಾಗೂ ಭಾರತ ಮೂಲದ ಮತ್ತೊಬ್ಬ ವಿದ್ಯಾರ್ಥಿ 14 ವರ್ಷದ ರೋಹನ್‌ ರಾಜೀವ್‌. 12 ತಾಸುಗಳ ಸ್ಪರ್ಧೆಯಲ್ಲಿ 35 ಶಬ್ದಗಳನ್ನು ಸರಿಯಾಗಿ ಉಚ್ಛರಿಸಿದ ಬಳಿಕ, ರೋಹನ್‌ ರಾಜೀವ್‌ ಎದುರು ಅನನ್ಯಾ ಗೆಲುವು ಸಾಧಿಸಿದ್ದಾಳೆ.

‘2017ನೇ ಸಾಲಿನ ನಮ್ಮ ಸ್ಕ್ರಿಪ್ಸ್‌ ರಾಷ್ಟ್ರೀಯ ಸ್ಪೆಲ್ಲಿಂಗ್‌ ಬೀ ವಿಜೇತೆ ಅನನ್ಯಾ ವಿನಯ್‌ಗೆ ಅಭಿನಂದನೆಗಳು. ಎಂಥಾ ಅದ್ಭುತ ಪ್ರದರ್ಶನ!’ ಎಂದು ಸ್ಪೆಲ್ಲಿಂಗ್‌ ಬೀ ಅಧಿಕೃತ ಟ್ವಿಟರ್‌ ಅಕೌಂಟ್‌ನಲ್ಲಿ ಟ್ವೀಟ್‌ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry