ಮುಂದಿನ ವರ್ಷ ಸೂರ್ಯಯಾನ

7

ಮುಂದಿನ ವರ್ಷ ಸೂರ್ಯಯಾನ

Published:
Updated:
ಮುಂದಿನ ವರ್ಷ ಸೂರ್ಯಯಾನ

ವಾಷಿಂಗ್ಟನ್‌: ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಈಗ ಸೂರ್ಯಯಾನಕ್ಕೆ ಸಜ್ಜಾಗಿದೆ.

ಮುಂದಿನ ವರ್ಷ ಉಡಾವಣೆಯಾಗಲಿರುವ  ಜಗತ್ತಿನ ಮೊದಲ ನೌಕೆಯು ಸೂರ್ಯನ ತಾಪಮಾನದ ಕುರಿತು ಮಹತ್ವದ ಅಧ್ಯಯನ ನಡೆಸಲಿದೆ.

ಇದರಿಂದ ಆರು ದಶಕಗಳಿಂದ ಸೂರ್ಯನ ಕುರಿತು ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳಿಗೆ ಪ್ರಮುಖ ಮಾಹಿತಿಗಳು ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಸೂರ್ಯನ ತಾಪವನ್ನು ತಡೆದುಕೊಳ್ಳಲು ಈ ನೌಕೆಗೆ  4.5 ಇಂಚುಗಳಷ್ಟು ದಪ್ಪದಾದ ಕಾರ್ಬನ್‌  ಕವಚಗಳನ್ನು ಅಳವಡಿಸಲಾಗಿದೆ.ಖ್ಯಾತ ಖಭೌತ ವಿಜ್ಞಾನಿ ಯೂಜಿನ್‌ ಪಾರ್ಕರ್‌ ಗೌರವಾರ್ಥ ಈ ಬಾಹ್ಯಾಕಾಶ ನೌಕೆಗೆ ಅವರ ಹೆಸರನ್ನಿಡಲಾಗಿದೆ.

60 ವರ್ಷಗಳ ಹಿಂದೆಯೇ ಸೌರ ಬಿರುಗಾಳಿ ಅಸ್ತಿತ್ವದಲ್ಲಿದೆ ಎಂದು ಪಾರ್ಕರ್‌ ಮುನ್ಸೂಚನೆ ನೀಡಿದ್ದರು. ಹೀಗಾಗಿಯೇ ಪಾರ್ಕರ್‌ ಅವರಿಗೆ ಈ ಗೌರವ ನೀಡಲಾಗಿದೆ. ಇದೇ ಪ್ರಥಮ ಬಾರಿ ಬದುಕಿರುವ ವಿಜ್ಞಾನಿಯ ಹೆಸರನ್ನು ಬಾಹ್ಯಾಕಾಶ ನೌಕೆಗೆ ಇಡಲಾಗಿದೆ  ಎಂದು ನಾಸಾ ತಿಳಿಸಿದೆ.

ಸೂರ್ಯ ಮತ್ತು ನಕ್ಷತ್ರಗಳು ಹೇಗೆ ಶಕ್ತಿಯನ್ನು ಬಳಸಿಕೊಳ್ಳುತ್ತವೆ ಎನ್ನುವ ಬಗ್ಗೆ 1950ರಲ್ಲಿ ವಿವರಣೆ ನೀಡಿದ್ದರು.

‘ಈ ನೌಕೆಯು ಸಣ್ಣ ಕಾರಿನಷ್ಟು ಗಾತ್ರದಲ್ಲಿದ್ದು, ಇದುವರೆಗೆ ಸೂರ್ಯನಿಗೆ ಸಂಬಂಧಿಸಿದಂತೆ ನಿಗೂಢವಾಗಿಯೇ ಉಳಿದಿರುವ ಅಂಶಗಳನ್ನು ಪತ್ತೆ ಮಾಡಲಿದೆ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜುಲೈ 31ರ ನಂತರದ 20 ದಿನಗಳ ಅವಧಿಯಲ್ಲಿ ಫ್ಲೋರಿಡಾದಲ್ಲಿನ ನಾಸಾ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ನೌಕೆ ಉಡಾವಣೆಯಾಗಲಿದೆ.

‘ಸೂರ್ಯನ ಕುರಿತ ಅಧ್ಯಯನಕ್ಕೆ ಉಡಾವಣೆಯಾಗುವ ನೌಕೆಯಿಂದ ಕುತೂಹಲಕಾರಿ ಅಂಶಗಳು ದೊರೆಯುವುದು ಖಚಿತ. ಅದರಲ್ಲೂ ಸೌರ ಬಿರುಗಾಳಿ ಕುರಿತು ಹೆಚ್ಚಿನ ವಿವರ ದೊರೆಯುತ್ತದೆ. ಇನ್ನೂ ಹೆಚ್ಚಿನ ಆಶ್ಚರ್ಯಕರ ಸಂಗತಿಗಳು ತಿಳಿಯುವುದು ಖಚಿತ’ ಎಂದು ವಿಜ್ಞಾನಿ ಪಾರ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry