ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಲ್ಲಿ ಕೊಚ್ಚಿಹೋದ ಕೇನ್ ಶತಕ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್ :  ಶುಕ್ರ ವಾರ ರಾತ್ರಿ ಸುರಿದ ಮಳೆಯಿಂದಾಗಿ ನ್ಯೂಜಿಲೆಂಡ್ ತಂಡದ ಗೆಲುವಿನ ಕನಸು ಕೊಚ್ಚಿಹೋಯಿತು. ಆಸ್ಟ್ರೇಲಿಯಾ ಸೋಲಿನಿಂದ ಪಾರಾಯಿತು.

ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ (100; 97ಎ, 8ಬೌಂ, 3 ಸಿ) ಅವರ  ಮನಮೋಹಕ ಶತಕದ ಬಲದಿಂದ ನ್ಯೂಜಿಲೆಂಡ್ ತಂಡವು  45 ಓವರ್‌ಗಳಲ್ಲಿ 291 ರನ್‌ ಗಳಿಸಿ ಆಲೌಟ್ ಆಯಿತು.  ಡಕ್ವರ್ಥ್ ಲೂಯಿಸ್ ನಿಯ ಮದ ಪ್ರಕಾರ ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿಗಾಗಿ 33 ಓವರ್‌ಗಳಲ್ಲಿ 235 ರನ್‌ಳ ಗುರಿಯನ್ನು ನಿಗದಿಪಡಿಸಲಾಯಿತು.  
ಆಸ್ಟ್ರೇಲಿಯಾ ತಂಡವು 9 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 53 ರನ್‌ ಗಳಿಸಿದ ಸಂದರ್ಭದಲ್ಲಿ ಮಳೆ ಸುರಿಯ ಲಾರಂಭಿಸಿತು. ಆದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು. ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಯಿತು.

ಕೇನ್‌ ಶತಕ ಸಂಭ್ರಮ
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡಕ್ಕೆ  ಮಾರ್ಟಿನ್ ಗಪ್ಟಿಲ್ ಮತ್ತು  ಲೂಕ್ ರಾಂಚಿ ಅವರು ತಂಡಕ್ಕೆ ಉತ್ತಮ ಆರಂಭ ನೀಡಿದರು. ಇಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಕೇವಲ ಐದು ಓವರ್‌ಗಳಲ್ಲಿ 40 ರನ್‌ಗಳು ಸೇರಿದವು. ಆದರೆ ಆರನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಅವರ ಎಸೆತ ವನ್ನು ಸಿಕ್ಸರ್‌ಗೆ ಎತ್ತುವ ಯತ್ನದಲ್ಲಿ ಗಪ್ಟಿಲ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕ್ಯಾಚಿತ್ತರು.

ನಂತರ ಕ್ರೀಸ್‌ಗೆ ಬಂದ ನಾಯಕ ಕೇನ್ ವಿಲಿಯಮ್ಸನ್ ಅವರು ರಾಂಚಿ ಜೊತೆಗೆ ರನ್‌ ಗಳಿಕೆಗೆ ವೇಗ ನೀಡಿದರು. ಅಲ್ಲದೇ ವಿಕೆಟ್ ಪತನವನ್ನೂ ತಡೆದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ಸೇರಿ 77 ರನ್‌ ಗಳನ್ನು ಸೇರಿಸಿ ದರು. ರಾಂಚಿ ಅವರು ಮೂರು ಆಕರ್ಷಕ ಸಿಕ್ಸರ್‌ಗಳನ್ನು ಸಿಡಿಸಿದರು. ಒಂಬತ್ತು ಬೌಂಡರಿಗಳಿದ್ದ ಅರ್ಧಶತಕ ವನ್ನು ದಾಖಲಿಸಿದರು. 16ನೇ ಓವರ್‌ ನಲ್ಲಿ ಅವರು ಜಾನ್‌ ಹೆಸ್ಟಿಂಗ್ಸ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಆದರೆ ಅವರ ಉದ್ದೇಶ ಈಡೇರಲಿಲ್ಲ. ಮ್ಯಾಕ್ಸ್‌ವೆಲ್ ಪಡೆದ ಅಮೋಘ ಕ್ಯಾಚ್‌ಗೆ ರಾಂಚಿ  ಪೆವಿಲಿಯನ್‌ ಸೇರಿದರು. ಜೊತೆಯಾಟಕ್ಕೆ ತೆರೆ ಬಿತ್ತು.
ಆದರೆ ಕೇನ್ ಮಾತ್ರ ಆತ್ಮವಿಶ್ವಾಸ ದಿಂದ ಆಡುತ್ತಿದ್ದರು. ಅವರ ಜೊತೆ ಗೂಡಿದ ರಾಸ್ ಟೇಲರ್ (46; 58ಎ, 6ಬೌಂ) ಕೂಡ ರನ್ ಕೊಳ್ಳೆ ಹೊಡೆದರು. 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಕೇನ್   ಶತಕದತ್ತ ದಾಪುಗಾಲಿಟ್ಟರು.

ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ಉತ್ತಮ ದಾಳಿಯ ನಡುವೆಯೂ ಕೇನ್ ದಿಟ್ಟತನದಿಂದ ಆಡಿದರು. 96 ಎಸೆತ ಗಳಲ್ಲಿ ಶತಕ ಪೂರೈಸಿದರು.  ತಮ್ಮ ಬ್ಯಾಟಿಂಗ್ ಅನ್ನು ಮತ್ತಷ್ಟು ಬಿರುಸು ಗೊಳಿಸುವ ಉದ್ದೇಶ ಹೊಂದಿದ್ದ ಕೇನ್ ರನ್‌ಔಟ್ ಆದರು. 40 ನೇ ಓವರ್‌ನಲ್ಲಿ  ಹೆನ್ರಿಕ್ಸ್‌ ಅವರ ಉತ್ತಮ ಫೀಲ್ಡಿಂಗ್‌ಗೆ ಕೇನ್ ದಂಡ ತೆತ್ತರು.

ಜೋಶ್ ಮಿಂಚು
ನಂತರ ಬಂದ ಬ್ಯಾಟ್ಸ್‌ಮನ್‌ಗಳನ್ನು ಕಾಲೂರಲು ಕಾಂಗರೂ ಪಡೆಯ ಬೌಲರ್ ಜೋಶ್ ಹ್ಯಾಜಲ್‌ವುಡ್ ಬಿಡಲಿಲ್ಲ. ನೀಲ್ ಬ್ರೂಮ್, ಜಿಮ್ಮಿ ನಿಶಾಮ್, ಮಿಷೆಲ್ ಸ್ಯಾಂಟನರ್, ಆ್ಯಡಂ ಮಿಲ್ನೆ ಮತ್ತು ಟ್ರೆಂಟ್ ಬೌಲ್ಟ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಒಟ್ಟು ಆರು ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿ ಕೊಂಡರು. ಅರ್ಧಶತಕದ ಅಂಚಿನಲ್ಲಿ ರಾಸ್ ಟೇಲರ್ ಕೂಡ ಹೆಸ್ಟಿಂಗ್ಸ್‌ ಬೌಲಿಂಗ್‌ನಲ್ಲಿ ಔಟಾದರು.

ಸಂಕ್ಷಿಪ್ತ ಸ್ಕೋರು
ನ್ಯೂಜಿಲೆಂಡ್: 45 ಓವರ್‌ಗಳಲ್ಲಿ 291 (ಮಾರ್ಟಿನ್ ಗಪ್ಟಿಲ್ 26, ಲೂಕ್ ರಾಂಚಿ 65, ಕೇನ್ ವಿಲಿಯಮ್ಸನ್ 100, ರಾಸ್ ಟೇಲರ್ 46,  ಜೋಶ್ ಹ್ಯಾಜಲ್‌ವುಡ್ 52ಕ್ಕೆ6, ಪ್ಯಾಟ್ ಕಮಿನ್ಸ್‌ 67ಕ್ಕೆ1, ಜಾನ್ ಹೇಸ್ಟಿಂಗ್ಸ್‌ 69ಕ್ಕೆ2);  ಆಸ್ಟ್ರೇಲಿಯಾ: 9 ಓವರ್‌ಗಳಲ್ಲಿ 3 ವಿಕೆಟ್‌ ಗಳಿಗೆ 53 (ಡೇವಿಡ್ ವಾರ್ನರ್ 18, ಮೊಸೆಸ್ ಹೆನ್ರಿಕ್ಸ್ 18, ಆ್ಯಡಂ ಮಿಲ್ನೆ 9ಕ್ಕೆ2, ಟ್ರೆಂಟ್ ಬೌಲ್ಟ್ 28ಕ್ಕೆ1) ಫಲಿತಾಂಶ: ರದ್ದು. ಎರಡೂ ತಂಡಗ ಳಿಗೂ ತಲಾ ಒಂದು ಪಾಯಿಂಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT