ಪ್ರೀ ಕ್ವಾರ್ಟರ್‌ಗೆ ಪೂರವ್‌–ದಿವಿಜ್‌

7

ಪ್ರೀ ಕ್ವಾರ್ಟರ್‌ಗೆ ಪೂರವ್‌–ದಿವಿಜ್‌

Published:
Updated:
ಪ್ರೀ ಕ್ವಾರ್ಟರ್‌ಗೆ ಪೂರವ್‌–ದಿವಿಜ್‌

ಪ್ಯಾರಿಸ್: ಭಾರತದ ಪೂರವ್ ರಾಜಾ ಮತ್ತು ದಿವಿಜ್‌ ಶರಣ್ ಜೋಡಿ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದೆ.

ಶ್ರೇಯಾಂಕ ರಹಿತ ಭಾರತದ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ 6–4, 3–6, 6–4ರಲ್ಲಿ ಆಸ್ಟ್ರಿಯಾದ ಒಲಿವರ್‌ ಮರಾಚ್ ಮತ್ತು ಕ್ರೊವೇಷ್ಯಾದ ಮಾಟೆ ಪಾವಿಕ್ ಅವರನ್ನು ಮಣಿಸಿದೆ.

ಭಾರತದ ಆಟಗಾರರು ಪ್ರೀ ಕ್ವಾರ್ಟರ್ ಪಂದ್ಯದಲ್ಲಿ 11ನೇ ಶ್ರೇಯಾಂ ಕದ ನೆದರ್ಲೆಂಡ್ಸ್‌ನ ಜೀನ್ ಜೂಲಿಯನ್ ರೋಜರ್ ಹಾಗೂ ರುಮೇನಿಯಾದ ಹೊರಿಯಾ ಟೆಕಾವು ಎದುರು ಆಡಲಿದ್ದಾರೆ.  ಐದು ಬ್ರೇಕ್‌ ಪಾಯಿಂಟ್‌ ಅವಕಾ ಶಗಳನ್ನು ಬಳಸಿಕೊಂಡ ಭಾರತದ ಜೋಡಿ ಐದು ಏಸ್‌ಗಳನ್ನು ಸಿಡಿಸುವ ಮೂಲಕ ಮಿಂಚಿತು.

ಪೇಸ್‌ಗೆ ಸೋಲು: ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಹಾಗೂ  ಅಮೆರಿಕದ ಸ್ಕಾಟ್ ಲಿಪ್ಸಿಕಿ 6–7, 2–6ರಲ್ಲಿ ಮರೆರೊ ಹಾಗೂ ರೋರ್ಬೆಡೊ ಜೋಡಿ ಎದುರು ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry