ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಣಾಹಣಿ ಇಂದು

7

ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಣಾಹಣಿ ಇಂದು

Published:
Updated:
ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಣಾಹಣಿ ಇಂದು

ಲಂಡನ್ : ದಕ್ಷಿಣ ಅಫ್ರಿಕಾ ಮತ್ತುಶ್ರೀಲಂಕಾ ತಂಡವು ಶನಿವಾರ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

’ಬಿ’ ಗುಂಪಿನ ಪಂದ್ಯದಲ್ಲಿ ಎ.ಬಿ. ಡಿವಿಲಿಯರ್ಸ್‌ ನಾಯಕತ್ವದ ದಕ್ಷಿಣ ಆಫ್ರಿಕಾ ಮತ್ತು ಏಂಜೆಲೊ ಮ್ಯಾಥ್ಯೂಸ್ ಬಳಗಗಳು ಹಣಾಹಣಿ ನಡೆಸಲಿವೆ.

ಜನವರಿಯಲ್ಲಿ ನಡೆದಿದ್ದ ಸರಣಿ ಯಲ್ಲಿ ದಕ್ಷಿಣ ಆಫ್ರಿಕಾ ತಂಡವು 5–0ಯಿಂದ ಶ್ರೀಲಂಕಾ ತಂಡವನ್ನು ಸೋಲಿಸಿತ್ತು. ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಅಗ್ರಸ್ಥಾನದಲ್ಲಿದೆ. 1998ರಲ್ಲಿ ನಡೆದಿದ್ದ ಚಾಂಪಿಯನ್ಸ್‌್ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆದ್ದಿತ್ತು.

ಅಗ್ರಮಾನ್ಯ ಬ್ಯಾಟ್ಸ್‌ಮನ್  ಎ.ಬಿ. ಡಿವಿಲಿಯರ್ಸ್, ಹಾಶೀಮ್ ಆಮ್ಲಾ, ಕ್ವಿಂಟನ್ ಡಿ ಕಾಕ್ ಅವರ ಬಲ ತಂಡಕ್ಕೆ ಇದೆ. ಬೌಲಿಂಗ್‌ನಲ್ಲಿ ಕಗಿಸೊ ರಬಾಡ, ಕ್ರಿಸ್ ಮೊರಿಸ್, ವೆರ್ನಾನ್ ಫಿಲಾಂಡರ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ.

ತಂಡಗಳು ಇಂತಿವೆ

ಎ.ಬಿ. ಡಿವಿಲಿಯರ್ಸ್ (ನಾಯಕ), ಫಾಫ್ ಡು ಪ್ಲೆಸಿ, ಇಮ್ರಾನ್ ತಾಹೀರ್, ಕ್ರಿಸ್ ಮೊರಿಸ್, ಆ್ಯಂಡಿಲೆ ಪೆಹಲುಕ ವಾಯೊ, ಡ್ವೇನ್ ಪ್ರೆಟೊರಿಯಸ್, ಜೆಪಿ ಡುಮಿನಿ, ಡೀನ್ ಎಲ್ಗರ್, ಕೇಶವ ಮಹಾರಾಜ್, ಮಾರ್ನ್ ಮಾರ್ಕೆಲ್, ವೇಯ್ನ ಪಾರ್ನೆಲ್, ವೆರ್ನಾನ್ ಫಿಲ್ಯಾಂಡರ್, ಕಗಿಸೊ ರಬಾಡ

ಶ್ರೀಲಂಕಾ: ದಿನೇಶ್ ಚಾಂಡಿಮಲ್, ನಿರೋಷನ್ ಡಿಕ್ವೆಲಾ, ನುವಾನ ಪ್ರದೀಪ್, ಅಸೆಲಾ ಗುಣರತ್ನೆ, ಧನುಷ್ಕಾ ಗುಣರತ್ನೆ, ಚಾಮರಾ ಕಪುಗೆದರಾ ನುವಾನ್ ಕುಲಶೇಖರ ಸುರಾಂಗ ಲಕ್ಮಲ್, ಕುಸಾಲ ಮೆಂಡಿಸ್, ದಿಲ್ಷಾನ್ ಮುನವೀರಾ, ದಿಲ್ರುವಾನ್ ಪೆರೆರಾ, ತಿಸಾರ ಪೆರೆರಾ, ಸಿಕ್ಕುಗೆ  ಪ್ರಸನ್ನ, ಲಕ್ಷಣ ಸಂದಕಾನ್, ವಿಕುಮ ಸಂಜಯ್, ಮಿಲಿಂದಾ ಸಿರಿವರ್ಧನೆ, ಉಪುಲ್ ತರಂಗಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry