ಕಾಳಿ ನದಿಯಲ್ಲಿ ಮೈನವಿರೇಳಿಸುವ ಸಾಹಸ: ದಿನೇಶ್‌, ಅಮಿತ್‌ ಮಿಂಚು

7

ಕಾಳಿ ನದಿಯಲ್ಲಿ ಮೈನವಿರೇಳಿಸುವ ಸಾಹಸ: ದಿನೇಶ್‌, ಅಮಿತ್‌ ಮಿಂಚು

Published:
Updated:
ಕಾಳಿ ನದಿಯಲ್ಲಿ ಮೈನವಿರೇಳಿಸುವ ಸಾಹಸ: ದಿನೇಶ್‌, ಅಮಿತ್‌ ಮಿಂಚು

ಜೊಯಿಡಾ (ಉತ್ತರ ಕನ್ನಡ): ಭೋರ್ಗೆರೆದು ಹರಿಯುತ್ತಿದ್ದ  ನೀರಿನ ಮೇಲೆ ಮೈನವಿರೇಳಿಸುವ ಸಾಹಸ ತೋರಿಸಿದ ಭಾರತದ ದಿನೇಶ್‌ ಪ್ರಸಾದ್‌ ಮತ್ತು ಅಮಿತ್‌ ಥಾಪಾ  ವೃತ್ತಿಪರ ಸ್ಪರ್ಧಿಗಳ ಕಯಾಕಿಂಗ್ ಉತ್ಸವದಲ್ಲಿ ಮೊದಲ ಹತ್ತರ ಒಳಗೆ ಸ್ಥಾನ ಗಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯು ಪ್ರವಾಸೋ ದ್ಯಮ ಇಲಾಖೆ ಸಹಕಾರದಲ್ಲಿ ಮೂರು ದಿನಗಳ ಕಯಾಕಿಂಗ್‌ ಉತ್ಸವ ಆಯೋ ಜಿಸಿದೆ. ಈ ಸ್ಪರ್ಧೆಗಳು ತಾಲ್ಲೂಕಿನ ಅವೆಡಾ ಗ್ರಾಮದ ಕಾಳಿ ನದಿಯಲ್ಲಿ ನಡೆಯುತ್ತಿದೆ.

ವೃತ್ತಿಪರರು ಹಾಗೂ ಕಲಿಕಾ ಹಂತ ದಲ್ಲಿರುವವರಿಗೆ ಪ್ರತ್ಯೇಕವಾಗಿ ಸ್ಪರ್ಧೆಗ ಳನ್ನು ಆಯೋಜಿಸಲಾಗಿದೆ.

ಮೊದಲ ದಿನ ಸ್ಲಲೊಮ್‌ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಪ್ರತಿ ಸ್ಪರ್ಧಿಗಳ ಸಾಹಸವೂ ರೋಮಾಂಚಕವಾಗಿತ್ತು.

ಭಾರತದ ಸ್ಪರ್ಧಿಗಳ ಮಿಂಚು: 300 ಮೀಟರ್ಸ್‌ ದೂರವಿದ್ದ ಗುರಿಯನ್ನು (ಸ್ಲಲೊಮ್‌ ವಿಭಾಗ) ದಿನೇಶ್‌ ಒಂದು ನಿಮಿಷ 23.43 ಸೆಕೆಂಡುಗಳಲ್ಲಿ ತಲುಪಿ ನಾಲ್ಕನೇ ಸ್ಥಾನ ಪಡೆದರು. ನ್ಯೂಜಿಲೆಂಡ್‌ನ ಸ್ಯಾಮ್‌ ಸಟ್ಟನ್‌ ಒಂದು ನಿಮಿಷ 17. 46ಸೆಕೆಂಡು ಗಳಲ್ಲಿ ಗುರಿ ಮುಟ್ಟಿ ಅಗ್ರಸ್ಥಾನ ಸಂಪಾದಿಸಿದರು. 

ಈ ವಿಭಾಗದಲ್ಲಿ ನದಿಯೊಳಗಿನ ಅಡೆತಡೆಗಳು ದಾಟಿ ಗುರಿ ಮುಟ್ಟುವ ಸವಾಲು ಸ್ಪರ್ಧಿಗಳಿಗಿತ್ತು.

ನದಿಯ ಮೂರು ಕಡೆಗಳಲ್ಲಿ ಎರಡು ದಿಕ್ಕಿಗೆ ಹಗ್ಗ ಕಟ್ಟಿ ಮಧ್ಯದಲ್ಲಿ ಕೋಲನ್ನು ನೇತು ಹಾಕಲಾಗಿತ್ತು.

ಫಲಿತಾಂಶ: (ಸ್ಲಲೊಮ್‌ ವಿಭಾಗದಲ್ಲಿ ಮೊದಲ ಹತ್ತು ಸ್ಥಾನ ಪಡೆದವರು): ಸ್ಯಾಮ್‌ ಸಟ್ಟನ್‌ (ನ್ಯೂಜಿಲೆಂಡ್‌; ಕಾಲ: 1:17.46ಸೆ.)–1, ವಿಲ್‌ ಹ್ಯಾಂಡ್‌ (ನ್ಯೂಜಿಲೆಂಡ್‌; 1:22.19ಸೆ.)–2, ಜೋಸೆಫ್‌ ಜೂರಿ (ನ್ಯೂಜಿಲೆಂಡ್‌; 1:22.43ಸೆ.)–3, ದಿನೇಶ್ ಪ್ರಸಾದ್‌ (ಭಾರತ; 1:23.43ಸೆ.)–4, ಜೋಯ್‌ ರೇಯಾ ಡಿಕೆನ್ಸ್‌ (ಇಂಗ್ಲೆಂಡ್‌; 1:24.43ಸೆ.)–5, ಕಾಲಮ್‌ ಸ್ಟ್ರಾಂಗ್‌ (ಇಂಗ್ಲೆಂಡ್‌; 1:27.01ಸೆ.)–6, ಸುಮನ್‌ ತಮಾಂಗ್‌ (ನೇಪಾಳ; 1:27.10ಸೆ.)–7, ಬೆನ್‌ ಹ್ಯೂಸ್‌ (ನ್ಯೂಜಿಲೆಂಡ್‌; 1:29.91ಸೆ.)–8, ಮಾರ್ಕ್‌ ಹೌವರ್ಸ್‌ (ನ್ಯೂಜಿಲೆಂಡ್‌; 1:30.23ಸೆ.)–9, ಅಮಿತ್‌ ಥಾಪಾ (ಭಾರತ; 1:39.67ಸೆ.)–10.

**

ಈ ಮೊದಲು ಕೇರಳದ ಮಲಬಾರ್‌ ಕಯಾಕಿಂಗ್‌ ಉತ್ಸವದಲ್ಲಿ ಭಾಗವಹಿಸಿದ್ದೆ. ಅಲ್ಲಿಗಿಂತ ಇಲ್ಲಿನ ಕಾಳಿ ನದಿಯಲ್ಲಿನ ಸ್ಪರ್ಧೆ ತುಂಬಾ ಚೆನ್ನಾಗಿದೆ.

–ಕಾಲಮ್‌ ಸ್ಟ್ರಾಂಗ್‌, ಅಮೆರಿಕದ ಸ್ಪರ್ಧಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry