ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

7

ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

Published:
Updated:
ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಹೊಳೆಹೊನ್ನೂರು: ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾನಾಯ್ಕ್ ಹೇಳಿದರು.

ಆನವೇರಿಯಲ್ಲಿ ಶುಕ್ರವಾರ ಹಿರಿ ಮಾವುರದಮ್ಮ ದೇವಿ ದೇವಸ್ಥಾನದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ‌ಕಾಮಗಾರಿಗಳು ಕಳಪೆಯಾದರೆ ಸಾರ್ವಜನಿಕರು ಪ್ರಶ್ನಿಸಬೇಕು. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿವೆ. ವಿಧಾನಸಭಾ ಕ್ಷೇತ್ರ ವಿಸ್ತಾರದಲ್ಲಿ ದೊಡ್ಡದಿದೆ. ಬಿಡುಗಡೆಯಾಗುವ ಅನುದಾನ ಕಡಿಮೆ ಇದೆ. ಸರ್ಕಾರದಿಂದ ಬರುವ ಅನು ದಾನದಲ್ಲಿ ಉತ್ತಮ ಯೋಜನೆಗಳನ್ನು ನೀಡಲಾಗಿದೆ ಎಂದರು.

ಸಮೀಪದ ಹೊಳೆಬೈರನಹಳ್ಳಿಯಲ್ಲಿ ₹ 2 ಕೋಟಿ 26 ಲಕ್ಷದ ವೆಚ್ಚದ ರಸ್ತೆ ಸಿಮೆಂಟ್ ರಸ್ತೆ ಕಾಮಗಾರಿ, ಅಶೋಕನಗರದಲ್ಲಿ ₹ 1 ಕೋಟಿ 8 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಜಾತಾ, ಎಂ.ದಾನೇಶ್, ಈಶಪ್ಪಗೌಡ, ಚಂದ್ರಶೇಖರಪ್ಪ ಗೌಡ, ಸುರೇಶಗೌಡ, ಹರೀಶ್, ಸತೀಶ್, ರಫೀಕ್, ನಾಗರಾಜ್, ಆಂಜನೇಯ, ರಾಜಶೇಖರ್, ಎಸ್.ಗಣಾಚಾರಿ, ನಾಗೇಶ್, ಬಿಂದು, ಪರುಶುರಾಮ್, ಹಾಲೇಶಯ್ಯ, ಎ.ಕೆ ರಾಮಪ್ಪ   ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry