‘ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಿ’

7
ಶಹಾಪುರದಲ್ಲಿ ಕೋಲಿ ಸಮಾಜದ ಜನ ಜಾಗೃತಿ ಸಮಾವೇಶ

‘ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಿ’

Published:
Updated:
‘ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಿ’

ಶಹಾಪುರ: ‘ಹಲವಾರು ವರ್ಷಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಕೋಲಿ ಸಮಾಜ ಹೋರಾಟ ನಡೆಸುತ್ತಿದ್ದರೂ ನ್ಯಾಯ ದೊರೆತಿಲ್ಲ. ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯ ತ್ವರಿತವಾಗಿ ನೆರವೇರಬೇಕು’ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಒತ್ತಾಯಿಸಿದರು.

ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ  ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಹಾಗೂ ಕೋಲಿ ಸಮಾಜದ ಜನ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಸಂಘಟಿತರಾಗಿ ಹೋರಾಟದ ಮೂಲಕ ನ್ಯಾಯ ಪಡೆಯ ಬೇಕು. ಧಾರ್ಮಿಕ ಸಂಸ್ಕಾರ ಕಲಿಯಬೇಕು. ರಾಜಕೀಯವಾಗಿ ತುಂಬಾ ದೂರ ಉಳಿದಿದ್ದೇವೆ. ಸಾಂಘಿಕವಾಗಿ ನಾವೆ ಲ್ಲರೂ ಒಗ್ಗೂಡಬೇಕು. ಹಿಂದುಳಿದ ವರ್ಗಗಳ  ಯುವಕರು ದುಶ್ಚಟಗಳಿಂದ ಮುಕ್ತರಾಗಿ, ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಬೇಕು. ಎಲ್ಲರೂ ಆರೋಗ್ಯವಂತರಾಗಿ ಬಾಳಬೇಕು’ ಎಂದರು.

ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿ,‘ನಂಬಿಕೆಗೆ ಇನ್ನೊಂದು ಹೆಸರು ಅಂಬಿಗ ಸಮಾಜ. ಶೈಕ್ಷಣಿಕವಾಗಿ ಸಮಾಜ ತುಂಬಾ ಹಿಂದುಳಿದಿದೆ. ಮೊದಲು ಶೈಕ್ಷಣಿಕ ಕ್ರಾಂತಿ ಸಮಾಜದಲ್ಲಿ ನಡೆಯಬೇಕು. ಅದ್ಧೂರಿಯಾಗಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿ ರುವುದು ಒಗ್ಗಟ್ಟಿನ ಶಕ್ತಿ ಪ್ರದರ್ಶಿದಂತೆ ಆಗಿದೆ’ ಎಂದರು.

ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಾಮಾಣಿಕ ಯತ್ನಕ್ಕೆ ನಾವು ಸಹಕಾರ ನೀಡುತ್ತೇವೆ.  ನಗರದಲ್ಲಿ ಒಂದು ಎಕರೆ ಜಮೀನು ಮತ್ತು ಶೈಕ್ಷಣಿಕ ಅಭಿವೃದ್ದಿಗೆ ಅನುದಾನ ನೀಡುವಂತೆ ಸಮಾಜ ಒತ್ತಾಯಿಸಿದೆ. ಬರುವ ದಿನದಲ್ಲಿ ಬೇಡಿಕೆಗೆ ಆದ್ಯತೆ ಸಿಗಬೇಕು’ ಎಂದರು.

ಗಡಿನಾಡು ಪ್ರದೇಶ ಅಭಿವೃದ್ಧಿ  ಮಂಡಳಿಯ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿ, ‘ಕೋಲಿ ಸಾಮಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಪರಮಗುರಿ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ ಆಗಿದೆ. ನಾವು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ನಮ್ಮ ಹಕ್ಕು ರಕ್ಷಣೆಗೆ ಹೋರಾಟ ಮಾಡುವುದು ಅಗತ್ಯ ವಾಗಿದೆ. ಸಮಾಜದ ಮುಖಂಡರು ಜೊತೆಗೂಡಿ ನಿರಂತರವಾಗಿ ಹೋರಾಡಿ ದ್ದಲ್ಲಿ, ಸಮಾಜವು ಎಸ್ಟಿ ಜನಾಂಗಕ್ಕೆ ಸೇರ್ಪಡೆಯಾಗುತ್ತದೆ’ ಎಂದರು.

ಕೋಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಸಪ್ಪನಗೋಳ, ತಾಲ್ಲೂಕು ಘಟಕದ ಅಧ್ಯಕ್ಷ ಅಯ್ಯಣ್ಣ ಕನ್ಯಾಕೊಳ್ಳೂರ, ಶಾಂತ ಗಂಗಾಧರ ಸ್ವಾಮೀಜಿ, ಹಣಮಂತರಾಯ ಮುತ್ಯಾ, ಶಿವು ಮುತ್ಯಾ ಕನ್ಯಾಕೊಳ್ಳೂರ, ಸಣ್ಣ ನಿಂಗಪ್ಪ ನಾಯ್ಕೋಡಿ,ದೊಡ್ಡ ಮಾನಯ್ಯ ಹಾದಿಮನಿ, ಡಾ.ಎಂ.ಎಸ್‌ ಶಿರವಾಳ, ರಾಮಣ್ಣ ನಾಯ್ಕೋಡಿ, ಶೋಭಾ ಬಾಣಿ, ಉಮೇಶ ಮುದ್ನಾಳ ಇದ್ದರು.

**

ಹಿಂದುಳಿದ ಸಮಾಜದ ಯುವಕರು ವ್ಯಸನದಿಂದ ದೂರ ಉಳಿಯಬೇಕು. ಅನ್ಯ ಸಮುದಾಯದ ಜೊತೆ ಸೌಹಾರ್ದಯುತವಾಗಿ ಜೀವನ ನಡೆಸಬೇಕು.

–ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ.

ನಿಜಶರಣ ಅಂಬಿಗರ ಚೌಡಯ್ಯನವರ ಪೀಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry