ಗೋವು ರಾಷ್ಟ್ರೀಯ ಪ್ರಾಣಿಯಾಗಲಿ

7
ವಿಧಾನ ಪರಿಷತ್‌ನ ಸದಸ್ಯ ಬಸನಗೌಡ ಯತ್ನಾಳ ಆಗ್ರಹ

ಗೋವು ರಾಷ್ಟ್ರೀಯ ಪ್ರಾಣಿಯಾಗಲಿ

Published:
Updated:
ಗೋವು ರಾಷ್ಟ್ರೀಯ ಪ್ರಾಣಿಯಾಗಲಿ

ವಿಜಯಪುರ: ‘ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ. ಗೋ ಹಂತಕರಿಗೆ ಜೀವಾವಧಿ ಶಿಕ್ಷೆ ನೀಡುವಂತಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

ನಗರದ ಸಿದ್ಧೇಶ್ವರ ದೇವಾಲಯದ ಎದುರು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ‘ಕಸಾಯಿಖಾನೆಗೆ ಜಾನುವಾರುಗಳ ಮಾರಾಟ ನಿಷೇಧ’ ನಿಯಮ ಜಾರಿಗೊಳಿಸಲು ತೆಗೆದು ಕೊಂಡ ನಿರ್ಧಾರವನ್ನು ಅಭಿನಂದಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಯತ್ನಾಳ ಮಾತನಾಡಿದರು.

ದೇಶದಲ್ಲಿ ವಾಸಿಸುತ್ತಿರುವ ಶೇ 80ರಷ್ಟು ಹಿಂದೂಗಳ ದೇವತೆಯಾದ ಗೋ ಮಾತೆ ಉಳಿವಿಗಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಐತಿಹಾಸಿಕ ನಿರ್ಣಯ ಕೈಗೊಂಡಿರುವುದು ಶ್ಲಾಘನೀಯ ಎಂದರು.

‘ಜಿಲ್ಲೆಯ ರೈತರು ತಮಗೆ ನಿರ್ವಹಣೆ ಮಾಡಲು ಆಗದ ಗೋವುಗಳನ್ನು ಕಸಾಯಿಖಾನೆಗೆ ಮಾರುವ ಬದಲು ನಮ್ಮ ಕಗ್ಗೋಡ ಗೋ-ಶಾಲೆಗೆ ನೀಡಿದರೆ, ಸಂಸ್ಥೆಯಿಂದ ₹ 2,500 ಬಹುಮಾನ ನೀಡಲಾಗುವದು’ ಎಂದು ಇದೇ ಸಂದರ್ಭ ಘೋಷಿಸಿದರು.

ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೋ ಸಂತತಿ ರಕ್ಷಿಸಿ, ಗೋ ಉತ್ಪನ್ನ ಗಳನ್ನು ಉಪಯೋಗಿಸಿ, ಗೋ ಸೇವೆ ಮಾಡಲು ಪ್ರತಿಜ್ಞಾ ವಿಧಿ  ಬೋಧಿಸ ಲಾಯಿತು. ಸಿದ್ರಾಮಪ್ಪ ಉಪ್ಪಿನ, ಸಂಗು ಸಜ್ಜನ, ಬಸಯ್ಯ ಹಿರೇಮಠ, ಚಿದಾ ನಂದ ಇಟ್ಟಂಗಿ, ಸಾಯಬಣ್ಣ ಭೋವಿ, ಗುರು ಗಚ್ಚಿನಮಠ, ಪರಶು ರಾಮ ರಜಪೂತ, ಬಾಗಪ್ಪ ಕನ್ನೊಳ್ಳಿ ಇದ್ದರು.

**

70 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಪ್ರಧಾನಿ ಜಾರಿಗೆ ತಂದಿದ್ದು ಶ್ಲಾಘನೀಯ

-ರಾಘವ ಅಣ್ಣಿಗೇರಿ,

ಅಧ್ಯಕ್ಷ, ಸ್ವಾಮಿ ವಿವೇಕಾನಂದ ಸೇನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry