ಇವಿಎಂ ದುರ್ಬಳಕೆ ಸಾಬೀತಿಗೆ ಸವಾಲು: ಇಸಿ ಕಚೇರಿಯಲ್ಲಿ ಎನ್‌ಸಿಪಿ, ಸಿಪಿಐಎಂ ಭಾಗಿ

7

ಇವಿಎಂ ದುರ್ಬಳಕೆ ಸಾಬೀತಿಗೆ ಸವಾಲು: ಇಸಿ ಕಚೇರಿಯಲ್ಲಿ ಎನ್‌ಸಿಪಿ, ಸಿಪಿಐಎಂ ಭಾಗಿ

Published:
Updated:
ಇವಿಎಂ ದುರ್ಬಳಕೆ ಸಾಬೀತಿಗೆ ಸವಾಲು: ಇಸಿ ಕಚೇರಿಯಲ್ಲಿ ಎನ್‌ಸಿಪಿ, ಸಿಪಿಐಎಂ ಭಾಗಿ

ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ದುರ್ಬಳಕೆ ಮಾಡಬಹುದು ಎಂಬುದನ್ನು ಸಾಬೀತು ಮಾಡಿ’ ಎಂದು ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದ್ದ ಚುನಾವಣಾ ಆಯೋಗ, ಶನಿವಾರ ದುರ್ಬಳಕೆ ಸಾಬೀತಿಗೆ ಅವಕಾಶ ನೀಡಿ ಇವಿಎಂಗಳನ್ನು ಇರಿಸಿದೆ.

ಚುನಾವಣಾ ಆಯೋಗದ ದೆಹಲಿ ಕಚೇರಿಯಲ್ಲಿ ಇವಿಎಂ ದುರ್ಬಳಕೆ ಸಾಬೀತು ಮಾಡಲು ಅವಕಾಶ ನೀಡಿ ವ್ಯವಸ್ಥೆ ಮಾಡಲಾಗಿದ್ದು, ಪ್ರಕ್ರಿಯೆ ಆರಂಭಿಸಲಾಗಿದೆ.

ಎನ್‌ಸಿಪಿ ಮತ್ತು ಸಿಪಿಐ ಎಂ ಪಕ್ಷಗಳು ಭಾಗವಹಿಸಿವೆ ಎಂದು ವರದಿಯಾಗಿದೆ.

ಎಲ್ಲಾ ಇವಿಎಂಗಳನ್ನೂ ಈ ಪ್ರಯೋಗಕ್ಕೆ ಒದಗಿಸಲು ಸಿದ್ಧವಿದ್ದೇವೆ. ಆದರೆ, ಈಚೆಗೆ ನಡೆದ ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಆಕ್ಷೇಪ ಇರುವುದರಿಂದ, ಅಲ್ಲಿ ಬಳಕೆಯಾಗಿದ್ದ ಇವಿಎಂಗಳ ಮೇಲೆಯೇ ದುರ್ಬಳಕೆ ಪ್ರಯೋಗ ನಡೆಯಲಿ’ ಎಂದು ಆಯೋಗ ಈ ಮೊದಲು ಹೇಳಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry