ತೋಳಗಳ ದಾಳಿಗೆ 25 ಕುರಿಮರಿಗಳು ಬಲಿ

7

ತೋಳಗಳ ದಾಳಿಗೆ 25 ಕುರಿಮರಿಗಳು ಬಲಿ

Published:
Updated:
ತೋಳಗಳ ದಾಳಿಗೆ 25 ಕುರಿಮರಿಗಳು ಬಲಿ

ಲಕ್ಷ್ಮೇಶ್ವರ: ಇಲ್ಲಿಗೆ ಸಮೀಪದ ಬಟ್ಟೂರ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ್ದ ಕುರಿದೊಡ್ಡಿ ಮೇಲೆ ತೋಳಗಳು ದಾಳಿ ನಡೆಸಿದ ಪರಿಣಾಮ 25ಕ್ಕೂ ಹೆಚ್ಚು ಕುರಿ ಮರಿಗಳು ಬಳಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಬಟ್ಟೂರ ಗ್ರಾಮದ ಉಡಚಪ್ಪ ಬೆಟಗೇರಿ ಎಂಬುವವರಿಗೆ ಸೇರಿದ ಕುರಿ ಮರಿಗಳು ತೋಳಗಳ ದಾಳಿಗೆ ಬಲಿಯಾಗಿವೆ ಎಂದು ತಿಳಿದು ಬಂದಿದೆ.

‘ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗಾಗಿ ಗ್ರಾಮಕ್ಕೆ ಹೋಗಿ ಬರುವುದರೊಳಗಾಗಿ ಕುರಿದೊಡ್ಡಿ ಮೇಲೆ ತೋಳಗಳು ದಾಳಿ ನಡೆಸಿ, ಮರಿಗಳನ್ನು ಕೊಂದುಹಾಕಿವೆ. ಇದರಿಂದ ದಿಕ್ಕು ತೋಚದಾಗಿದೆ’ ಎಂದು ಕುರಿ ಹಿಂಡಿನ ಮಾಲೀಕ ಉಡಚಪ್ಪ ಬೆಟಗೇರಿ ಅಲವತ್ತುಕೊಂಡರು.

ತೋಳಗಳ ದಾಳಿಯಿಂದ ಬಲಿಯಾಗಿದ್ದ ಕುರಿ ಮರಿಗಳ ಮುಂದೆ ಕುಳಿತು ಉಡಚಪ್ಪ ಗೋಗರೆಯುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

‘ಕುರಿ ಸಾಕಣಿಕೆಯಿಂದ ಬದುಕು ಸಾಗಿಸುತ್ತಿದ್ದ ಉಡಚಪ್ಪ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ. ಕುರಿಮರಿ ಕಳೆದುಕೊಂಡಿರುವ ಉಡಚಪ್ಪನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ರಂಗಪ್ಪ ಪೂಜಾರ, ಚೆನ್ನಪ್ಪ ಸೊರಟೂರ, ಪರಸಪ್ಪ ಇಮ್ಮಡಿ, ಮಲ್ಲು ಕಳಸದ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಎಸ್.ಎಲ್. ವಿಭೂತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry