ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಪಟೇಲ್‌ ನಗರ ಜನ ಕಂಗಾಲು

ಕುಡಿಯುವ ನೀರಿನಲ್ಲಿ ಸೇರಿದ ಚರಂಡಿ ನೀರು; ಶುದ್ಧ ನೀರಿನ ಘಟಕಕ್ಕೆ ಬೀಗ
Last Updated 3 ಜೂನ್ 2017, 6:46 IST
ಅಕ್ಷರ ಗಾತ್ರ

ಹೊಸಪೇಟೆ: ಕುಡಿಯುವ ನೀರಿನ ಜತೆ ಚರಂಡಿ ನೀರು ಸೇರುತ್ತಿರುವುದರಿಂದ ಇಲ್ಲಿನ ಪಟೇಲ್‌ ನಗರದ ಜನ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಕಾಲೊನಿಯಲ್ಲಿರುವ ಶುದ್ಧ ಕುಡಿವ ನೀರಿನ ಘಟಕಗಳಿಗೆ ಮೇ 31ರಂದು ತಾಲ್ಲೂಕು ಆಡಳಿತವು ಬೀಗ ಜಡಿದ ನಂತರ ಈ ಸಮಸ್ಯೆ ಮತ್ತಷ್ಟು ಬಿಗಡಾ ಯಿಸುವಂತೆ ಮಾಡಿದೆ.

ಪಟೇಲ್‌ ನಗರದಲ್ಲಿ ಸುಮಾರು ಐದು ಸಾವಿರ ಜನಸಂಖ್ಯೆ ಇದೆ. ಇಲ್ಲಿನ ಬಹುತೇಕ ಜನ ನಲ್ಲಿ ನೀರನ್ನೇ ಅವ ಲಂಬಿಸಿದ್ದಾರೆ. ಆದರೆ, ಆ ನೀರಿನ ಜತೆ ಚರಂಡಿ ನೀರು ಸೇರಿಕೊಳ್ಳುತ್ತಿರುವುದ ರಿಂದ ಅದು ಕುಡಿಯಲು ಯೋಗ್ಯವಾ ಗಿಲ್ಲ. ನೀರು ದುರ್ಗಂಧದಿಂದ ಕೂಡಿ ರುತ್ತದೆ. ನಗರಸಭೆ ಸರಬರಾಜು ಮಾಡುವ ನೀರಿನಿಂದ ಬಟ್ಟೆ, ಬರೆ ಕೂಡ ತೊಳೆಯಲು ಆಗುವುದಿಲ್ಲ. ಹೀಗಾಗಿ ಇಲ್ಲಿನ ಜನ ಶುದ್ಧ ಕುಡಿಯುವ ನೀರಿನ ಘಟಕಗಳನ್ನೇ ನೆಚ್ಚಿಕೊಂಡಿದ್ದಾರೆ. ದೈನಂ ದಿನ ಕೆಲಸಗಳಿಗೆ ಅನ್ಯ ಭಾಗಗಳಿಂದ ನೀರನ್ನು ತರಿಸಿಕೊಳ್ಳುತ್ತಾರೆ. ಶುದ್ಧ ನೀರಿನ ಘಟಕಗಳಲ್ಲಿ ಹಣ ಪಾವತಿಸಿ ಕುಡಿಯುವ ನೀರು ಕೊಂಡೊಯ್ಯುತ್ತಾರೆ. ಆದರೆ, ಈಗ ಅವುಗಳಿಗೂ ಬೀಗ ಬಿದ್ದಿ ರುವುದರಿಂದ ಜನ ಕಂಗಾಲಾಗುವಂತೆ ಮಾಡಿದೆ. ಜನ ಬಿಂದಿಗೆ ಹಾಗೂ ಕ್ಯಾನ್‌ ಗಳನ್ನು ಹಿಡಿದು ನೀರಿಗಾಗಿ ನಗರದ ಅನ್ಯ ಬಡಾವಣೆಗಳಿಗೆ ಸುತ್ತಾಡಬೇಕಿದೆ.

ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಅಪಾರ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತದೆ. ಜತೆಗೇ ಅದರ ವ್ಯರ್ಥ ನೀರು ಗಿಡ, ಗಂಟೆಗಳಿಗೂ ಬಳಸುವಂತಿಲ್ಲ. ಇದನ್ನು ಮನಗಂಡು ಮಾಲಿನ್ಯ ನಿಯಂತ್ರಣ ಮಂಡಳಿಯು ಅವುಗಳನ್ನು ಮುಚ್ಚಿಸುವಂತೆ ಆದೇಶಿ ಸಿದೆ. ಈ ಕಾರಣಕ್ಕಾಗಿಯೇ ಜೆಸ್ಕಾಂ ಇತ್ತೀಚೆಗೆ ಪಟೇಲ್‌ ನಗರದಲ್ಲಿರುವ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದೆ.

ನಗರಸಭೆ ಸರಬರಾಜು ಮಾಡುತ್ತಿ ರುವ ನೀರು ಅಶುದ್ಧವಾಗಿದೆ. ಇನ್ನೊಂ ದೆಡೆ ಶುದ್ಧ ಕುಡಿಯುವ ನೀರಿನ ಘಟಕ ಗಳನ್ನು ಮುಚ್ಚಿಸಿರುವುದರಿಂದ ಜನ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಟೇಶನ್‌ ರಸ್ತೆಯಲ್ಲೂ ಇದೇ ಸ್ಥಿತಿ ಇದೆ.

‘ಹಲವು ತಿಂಗಳಿಂದ ಬಡಾವಣೆ ಯಲ್ಲಿ ಅಶುದ್ಧ ನೀರು ಬರುತ್ತಿದೆ. ಜಬ್ಬಲ್‌ ಸರ್ಕಲ್‌ ಬಳಿ ಚರಂಡಿ ನೀರು ಕುಡಿ ಯುವ ನೀರಿನೊಂದಿಗೆ ಸೇರುತ್ತಿದೆ. ಇದರ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಪಟೇಲ್‌ ನಗರ ವಾರ್ಡ್‌ ಪ್ರತಿನಿಧಿಸುವ ನಗರಸಭೆ ಸದಸ್ಯೆ ನಾಗಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶುದ್ಧ ನೀರಿನ ಘಟಕಗಳನ್ನು ಕೂಡ ಮುಚ್ಚಿಸಿರುವುದರಿಂದ ಜನರಿಗೆ ತೀವ್ರ ಸಮಸ್ಯೆಯಾಗಿದೆ. ನಗರಸಭೆಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ವರೆಗೆ ಪಟೇಲ್‌ ನಗರದ ಮೂರೂ ಶುದ್ಧ ನೀರಿನ ಘಟಕಗಳು ಕೆಲಸ ನಿರ್ವಹಿಸಲು ಬಿಡಬೇಕು’ ಎಂದು ಹೇಳಿದರು.

‘ಬ್ರಾಂಡೆಡ್‌ ಕಂಪೆನಿ ಒತ್ತಡಕ್ಕೆ ಮಣಿದು ನೀರಿನ ಘಟಕಗಳನ್ನು ಮುಚ್ಚಿಸ ಲಾಗಿದೆ. ಕಂಪೆನಿಗಳು ಒಂದು ಲೀಟರ್‌ ನೀರನ್ನು ₹ 20ಕ್ಕೆ ಮಾರಾಟ ಮಾಡು ತ್ತಿವೆ. ನಮ್ಮ ಘಟಕಗಳಲ್ಲಿ ₹ 7ಕ್ಕೆ 25 ಲೀಟರ್‌ ನೀರು ಮಾರಾಟ ಮಾಡುತ್ತಿ ದ್ದೇವೆ. ಲಾಭಕ್ಕಿಂತ ಜನರಿಗೆ ಸೇವೆ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶ ವಾಗಿದೆ’ ಎನ್ನುತ್ತಾರೆ ಪಟೇಲ್‌ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಮಾಲೀಕ ಬಸವರಾಜ.

**

ಕುಡಿಯುವ ನೀರು ಕಲಬೆರಕೆಯಾಗುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಇದನ್ನು ಸರಿಪಡಿಸಿ, ಶುದ್ಧ ಕುಡಿವ ನೀರು ಪೂರೈಸಲಾಗುವುದು
-ಸೈಯದ್‌ ಮನ್ಸೂರ್‌
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT