ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸಿದ್ಧತೆಗೆ ಪೂರ್ಣಾವಧಿ ಪ್ರಚಾರ!

‘ಮೋದಿ ಫೆಸ್ಟ್‌’ಗೆ ಪ್ರಚಾರದ ಕೊರತೆ!
Last Updated 3 ಜೂನ್ 2017, 6:53 IST
ಅಕ್ಷರ ಗಾತ್ರ

ಬಳ್ಳಾರಿ: ಜೂನ್‌ 5ರಿಂದ 15 ದಿನ ಬಿಜೆಪಿಯ ಮುಖಂಡರು ತಮಗೆ ನಿಗದಿ ಪಡಿಸಿದ ಊರುಗಳಲ್ಲಿ ಪೂರ್ಣಾವಧಿ ವಾಸ್ತವ್ಯ ಹೂಡಬೇಕು. ಹತ್ತಿರದಲ್ಲೇ ಮನೆ ಇದೆ ಎಂದು ಹೋಗುವಂತಿಲ್ಲ. ಕಾರ್ಯ ಕರ್ತರ ಮನೆ ಬಿಟ್ಟು ಸಂಬಂಧಿಕರ ಮನೆಯಲ್ಲಿ ಊಟ ಮಾಡುವಂತಿಲ್ಲ, ತಂಗುವಂತಿಲ್ಲ!

–ಇವು ದೀನ್ ದಯಾಳ್‌ ಉಪಾ ಧ್ಯಾಯ ಶತಮಾನೋತ್ಸವ ಆಚರಣೆ ಅಂಗವಾಗಿ ಪಕ್ಷವು ಬೂತ್‌ ಮಟ್ಟದಲ್ಲಿ ಪೂರ್ಣಾವಧಿಯ ಪ್ರಚಾರ ನಡೆಸಲು ನಿಯೋಜಿತರಾದವರಿಗೆ ನೀಡಿರುವ ಕಟ್ಟು ನಿಟ್ಟಿನ ಸೂಚನೆಗಳಲ್ಲಿ ಪ್ರಮುಖವಾದವು.

ಮೇ ತಿಂಗಳಲ್ಲಿ ಮೈಸೂರಿನಲ್ಲಿ ನಡೆ ದಿದ್ದ ರಾಜ್ಯ ಕಾರ್ಯಕಾರಿಣಿಯಲ್ಲಿ ಪಕ್ಷವು ಪೂರ್ಣಾವಧಿ ಪ್ರಚಾರದ ನಿರ್ಧಾರವನ್ನು ಕೈಗೊಂಡಿತ್ತು. ನಂತರ ಜಿಲ್ಲೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಾರ್ಯ ಕಾರಿಣಿ ನಡೆಯುವುದು ವಿಳಂಬವಾಗಿರು ವುದರಿಂದ, ಪ್ರಚಾರವೂ ವಿಳಂಬವಾಗ ಲಿದೆ. ಜೂನ್‌ 1ರಿಂದ 15ರವರೆಗೆ ಬೂತ್‌ ಮಟ್ಟದಲ್ಲಿ ಪೂರ್ಣಾವಧಿ ಪ್ರಚಾರ ನಡೆಸುವ ಬಿಜೆಪಿಯ ನಿರ್ಧಾರವು ಜಿಲ್ಲೆಯಲ್ಲಿ ಜೂನ್‌ 5ರಿಂದ ಅನುಷ್ಠಾನಕ್ಕೆ ಬರಲಿದೆ.

ಪ್ರಚಾರದ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಮುಖಂಡರನ್ನು ಉತ್ತೇಜಿ ಸುವ ಸಲುವಾಗಿ ರಾಜ್ಯಮಟ್ಟದ ಮುಖಂ ಡರ ಪ್ರವಾಸವು ಶುಕ್ರವಾರದಿಂದಲೇ ಆರಂಭವಾಗಿದೆ.
ಪೂರ್ಣಾವಧಿ ವಾಸ್ತವ್ಯ: ಪಕ್ಷವನ್ನು ತಳ ಮಟ್ಟದಲ್ಲಿ ಬಲಗೊಳಿಸುವ ಸಲುವಾಗಿ ಸಮುದಾಯವನ್ನು ಒಳಗೊಳ್ಳುವಂತೆ ಮಾಡಬೇಕಾಗಿರುವುದರಿಂದ ಮುಖಂ ಡರು ನಿಯೋಜಿತ ಜಾಗ ಬಿಟ್ಟು ಕದಲು ವಂತಿಲ್ಲ ಎಂದು ವರಿಷ್ಠರು ಸೂಚಿಸಿದ್ದಾರೆ. ಮುಖಂಡರ ಸ್ಥಳ ನಿಯೋಜನೆ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಪಕ್ಷದ ಮಾಧ್ಯಮ ಸಂಚಾಲಕ  ಕೃಷ್ಣಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಸದರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಪಕ್ಷವನ್ನೂ ಬಲಪಡಿಸ ಬೇಕು, ದೀನ್‌ ದಯಾಳರ ಶತಮಾ ನೋತ್ಸವಕ್ಕೂ ವಿಶೇಷ ಮೆರುಗು ತರ ಬೇಕು ಎಂಬುದು ಉದ್ದೇಶ ಎಂದರು.

**

‘ಮೋದಿ ಫೆಸ್ಟ್‌’ಗೆ  ಪ್ರಚಾರದ  ಕೊರತೆ!

ಬಳ್ಳಾರಿ: ನಗರದ ಕಿತ್ತೂರುರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿ ಬಿಜೆಪಿ ಶುಕ್ರವಾರದಿಂದ ಏರ್ಪಡಿಸಿರುವ ‘ಮೋದಿ ಫೆಸ್ಟ್‌’ ಪ್ರದರ್ಶನ ಮೇಳವು ಜನರೇ ಇಲ್ಲದೆ ಭಣಗುಟ್ಟಿತು.

ಸಂಜೆ 4 ರವೇಳೆಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಮತ್ತು ಸಂಸದ ಬಿ.ಶ್ರೀರಾಮುಲು ಪ್ರದರ್ಶನಕ್ಕೆ ಚಾಲನೆ ನೀಡಬೇಕಿತ್ತು. ಆದರೆ, ಸ್ಥಳಕ್ಕೆ ಬಂದ ಈಶ್ವರಪ್ಪ ಅವರು ಬಂದಾಗ ಅಲ್ಲಿ ಕಾರ್ಯಕ್ರಮ ಉದ್ಘಾಟನೆಯ ಯಾವ ಕುರುಹೂ ಕಂಡುಬರಲಿಲ್ಲ. ಅವರ ಹಿಂದೆ ಬಂದ ಸ್ಥಳೀಯ ಮುಖಂಡರ ಗುಂಪನ್ನು ಬಿಟ್ಟರೆ ಬೇರೆ ಜನರೂ ಇರಲಿಲ್ಲ.

ಇಂಥ ಸನ್ನಿವೇಶದಲ್ಲೇ ಈಶ್ವರಪ್ಪ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿದರು. ಸ್ಥಳದಲ್ಲಿ ಪ್ರದರ್ಶಿಸಿದ್ದ ಭಿತ್ತಿಫಲಕಗಳನ್ನು ವೀಕ್ಷಿಸಿದರು.

ನಂತರ ವೇದಿಕೆ ಬಳಿಗೆ ತೆರಳಿದ ಅವರು ವೇದಿಕೆ ಏರಿ, ಡಿಜಿಟಲ್‌ ಪರದೆಯ ಮೇಲೆ ಪ್ರದರ್ಶನ ಗೊಳ್ಳುತ್ತಿದ್ದ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಕುರಿತ ಪ್ರಚಾರ ದೃಶ್ಯಗಳನ್ನು ಕೆಲ ಕ್ಷಣ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮುಖಂಡರು ವೇದಿಕೆಯ ಮೊದಲ ಸಾಲಿನಲ್ಲಿ ಕುಳಿತಿದ್ದರು.

ದೃಶ್ಯಾವಳಿ ವೀಕ್ಷಣೆಯ ನಂತರ ಕೆಳಗಿಳಿದ ಈಶ್ವರಪ್ಪ ಸ್ಥಳದಿಂದ ನಿರ್ಗಮಿಸಿದರು. ಅವರೊಂದಿಗೆ ಮುಖಂಡರೂ ನಿರ್ಗಮಿಸಿದರು. ನಂತರ ಇಡೀ ಸಭಾಂಗಣ ಜನರಿಲ್ಲದೆ ಭಣಗುಟ್ಟಿತು.

ಈ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ‘ಈ ಕಾರ್ಯಕ್ರಮ ಇರುವ ಬಗ್ಗೆ ಇಲ್ಲಿಗೆ ಬಂದ ಮೇಲಷ್ಟೇ ಗೊತ್ತಾಯಿತು’ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು. ಸಂಘಟಕರತ್ತ ತಿರುಗಿದ ಅವರು ‘ಪ್ರಚಾರದ ಕಡೆ ಗಮನ ಕೊಡಬೇಕು’ ಎಂದು ಸೂಚಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್‌, ಮುಖಂಡರಾದ ಜಿ.ಸೋಮಶೇಖರ ರೆಡ್ಡಿ, ಮೃತ್ಯುಂಜಯ ಜಿನಗಾ, ಪ್ರೊ.ಎಸ್‌.ಜೆ.ವಿ.ಮಹಿಪಾಲ, ಎಸ್‌.ಗುರುಲಿಂಗನಗೌಡ, ಶಶಿಕಲಾ, ರಾಮಲಿಂಗಪ್ಪ ಹಾಜರಿದ್ದರು.

**

ಅಭ್ಯರ್ಥಿ ಆಯ್ಕೆಗೆ ಸಮೀಕ್ಷೆ: ಈಶ್ವರಪ್ಪ

ಬಳ್ಳಾರಿ: ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂದ ಸಮೀಕ್ಷೆ ನಡೆಯಲಿದೆ. ಪಕ್ಷದ ರಾಜ್ಯಮಟ್ಟ, ಜಿಲ್ಲಾಮಟ್ಟ ಹಾಗೂ ತಾಲ್ಲೂಕು ಮಟ್ಟದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಲಾಗುವುದು. ನಂತರ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗು ವುದು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಪೂರ್ಣಾವಧಿ ಕಾರ್ಯಕರ್ತರು ಚುನಾವಣೆ ದೃಷ್ಟಿಯಿಂದ 15 ದಿನ ಪೂರ್ಣ ಸಮಯ ನೀಡಬೇಕು ಎಂದು ರಾಷ್ಟ್ರೀಐ ಅಧ್ಯಕ್ಷ ಅಮಿತ್‌ ಷಾ ಸೂಚಿಸಿದ್ದಾರೆ. ಅದರಂತೆ ಬೆಳಿಗ್ಗೆ ದಾವಣಗೆರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳ್ಳಾರಿಗೆ ಭೇಟಿ ನೀಡಿರುವೆ. ಶನಿವಾರ ರಾಯಚೂರು, ಕೊಪ್ಪಳದಲ್ಲಿ ಸಭೆ ನಡೆಸುವೆ’ ಎಂದರು.

**

ಪೂರ್ಣಾವಧಿ ಪ್ರಚಾರದ ಕುರಿತು ಜಾಗೃತಿ ಮೂಡಿಸಲೆಂದೇ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವೆ
–ಕೆ.ಎಸ್‌.ಈಶ್ವರಪ್ಪ
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT