ಕರಾವಳಿಯ ಚೆಲುವೆ ಹಾಲಿವುಡ್‌ಗೆ

7

ಕರಾವಳಿಯ ಚೆಲುವೆ ಹಾಲಿವುಡ್‌ಗೆ

Published:
Updated:
ಕರಾವಳಿಯ ಚೆಲುವೆ ಹಾಲಿವುಡ್‌ಗೆ

ಮಂಗಳೂರು: ನಗರದ ಶಾರದಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜೋಸಿಟಾ ಅನೋಲಾ ರೋಡ್ರಿಗಸ್‌ ಹಾಲಿವುಡ್‌ ನಿರ್ದೇಶಕ ಫ್ರೆಡ್ರಿಕ್‌ ಡಿಯೋಸ್‌ ಅವರ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಮುಂಬೈನಲ್ಲಿ ಕಳೆದ ತಿಂಗಳು ನಡೆದ ‘ಟೀನ್‌ ಮಿಸ್‌ ಸೌತ್‌ ಏಷಿಯಾ’ ದಲ್ಲಿ ಗೆದ್ದಿರುವ ಜೋಸಿಟಾ ನೃತ್ಯ ಸಂಗೀತದಲ್ಲಿ  ಆಸಕ್ತಿ. ಆಕೆಗೆ ಮಾಡೆಲಿಂಗ್‌ ಇಷ್ಟ. ಈಗಾಗಲೇ ತುಳು ಸಿನಿಮಾದಲ್ಲಿ ನಟಿಸಿದ್ದಾರೆ.

ಮಕ್ಕಾವ್‌ನಲ್ಲಿ ನಡೆದ ವರ್ಲ್ಡ್‌ ಟೀನ್‌ ಸೂಪರ್‌ ಮಾಡೆಲ್‌ನಲ್ಲಿ ಅವರು ಮೊದಲ 10 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈ ಕಾರ್ಯಕ್ರಮ ನೋಡಿದ ನಿರ್ದೇಶಕ ಫ್ರೆಡ್ರಿಕ್‌ ಅವರು, ತಮ್ಮ ಚಿತ್ರದಲ್ಲಿ ನಟಿಸುವಂತೆ ಕೋರಿದ್ದಾರೆ. ಜೋಸಿಟಾ ಅವರೂ ಖುಷಿಯಿಂದಲೇ ಈ ಅವಕಾಶವನ್ನು ಒಪ್ಪಿಕೊಂಡಿದ್ದಾರೆ.  ಫ್ರೆಡ್ರಿಕ್‌ ಚಿತ್ರದಲ್ಲಿ ಭಾರತೀಯ ಪಾತ್ರವೊಂದನ್ನು ನಿರ್ವಹಿಸುವ ಹೊಣೆ ಅವರಿಗೆ ದೊರೆಯುವ ನಿರೀಕ್ಷೆ ಇದೆ.

ಹಾಲಿವುಡ್‌ ಚಿತ್ರದ ಕುರಿತು ಚರ್ಚೆ ನಡೆಸಲು ನಿರ್ದೇಶಕ ಫ್ರೆಡ್ರಿಕ್ ಸದ್ಯವೇ ಮುಂಬೈಯಲ್ಲಿ ಜೋಸಿಟಾ ಅವರನ್ನು ಭೇಟಿಯಾಗುವರು. ಕೊಡಿಯಾಲ್‌ಬೈಲ್‌ನ ನಿವಾಸಿ ಆಗಿರುವ ಜೋಸಿಟಾ ಅವರ ತಂದೆ ವಿಲ್ಫ್ರೆಡ್‌ ಮತ್ತು ತಾಯಿ ಅನಿತಾ ಲೋಬೊ.

ಲ್ಯಾಕ್ಮೆ ಫ್ಯಾಶನ್‌ ನಲ್ಲಿಯೂ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ. ‘ದೇವೆರ್ನ ಮಾಯೆ’ ಎಂಬ ತುಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಪ್ರಾಧ್ಯಾಪಕರ ನೆರವಿನಿಂದ ಕಲಿಕೆ ಮತ್ತು ಮಾಡೆಲಿಂಗ್‌ ಅನ್ನು ಏಕಕಾಲಕ್ಕೆ ನಿರ್ವಹಿಸುತರುವುದಾಗಿ  ಹೇಳಿ ಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry