ಬಹುದೊಡ್ಡ ಮುಸ್ಲಿಂ ಜನಸಂಖ್ಯೆಯ ಹೊರತಾಗಿಯೂ ಭಾರತದಲ್ಲಿ ಐಎಸ್‌ ನೆಲೆಯೂರಲಾಗಿಲ್ಲ: ರಾಜನಾಥ್

7

ಬಹುದೊಡ್ಡ ಮುಸ್ಲಿಂ ಜನಸಂಖ್ಯೆಯ ಹೊರತಾಗಿಯೂ ಭಾರತದಲ್ಲಿ ಐಎಸ್‌ ನೆಲೆಯೂರಲಾಗಿಲ್ಲ: ರಾಜನಾಥ್

Published:
Updated:
ಬಹುದೊಡ್ಡ ಮುಸ್ಲಿಂ ಜನಸಂಖ್ಯೆಯ ಹೊರತಾಗಿಯೂ ಭಾರತದಲ್ಲಿ ಐಎಸ್‌ ನೆಲೆಯೂರಲಾಗಿಲ್ಲ: ರಾಜನಾಥ್

ನವದೆಹಲಿ: ಭಾರತದಲ್ಲಿ ವಿಶ್ವದ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆ ಇದೆ. ಆದರೆ, ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ(ಐಎಸ್) ದೇಶದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರ ಮೂರು ವರ್ಷಗಳ ಪೂರ್ಣಾವಧಿಯ ವರದಿಯೊಂದನ್ನು ರಾಜನಾಥ್‌ ಸಿಂಗ್‌ ಅವರು ನೀಡಿದರು.

ಈ ಸಂಬಂಧ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಪೂರ್ಣ ಜವಾಬ್ದಾರಿಯೊಂದಿಗೆ ದೇಶಕ್ಕೆ ಭದ್ರತೆಯನ್ನು ಒದಗಿಸಲು ನಾವು ಶ್ರಮಿಸುತ್ತಿದ್ದೇವೆ’ ಎಂದು ಹೇಳಿದರು.

ದೇಶಾದ್ಯಂತ 90 ಐಎಸ್ ಸಹಚರರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಐಎಸ್ ಮತ್ತು ಅನ್ಸರ್ ಉಲ್ ಅಮ್ಮಾ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ರಾಜನಾಥ್‌ ಸಿಂಗ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry