ಬಿಜೆಪಿಗೆ ಬ್ರಿಗೇಡ್ ಕಾರ್ಯಕರ್ತರ ಆಹ್ವಾನ: ಈಶ್ವರಪ್ಪ

7

ಬಿಜೆಪಿಗೆ ಬ್ರಿಗೇಡ್ ಕಾರ್ಯಕರ್ತರ ಆಹ್ವಾನ: ಈಶ್ವರಪ್ಪ

Published:
Updated:
ಬಿಜೆಪಿಗೆ ಬ್ರಿಗೇಡ್ ಕಾರ್ಯಕರ್ತರ ಆಹ್ವಾನ: ಈಶ್ವರಪ್ಪ

ರಾಯಚೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಬಿಜೆಪಿ ಹಿಂದುಳಿದ ಮೋರ್ಚಾ ಸೇರುವಂತೆ ಆಹ್ವಾನಿಸಿದ್ದೇನೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಹಿಂದುಳಿದ ವರ್ಗಗಳ ಮೋರ್ಚಾ ಸೇರುವುದಕ್ಕೆ ಇಲ್ಲಿಯವರೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಬ್ರಿಗೇಡ್ ನಾಯಕರಿಗೆಲ್ಲ ಮೋರ್ಚಾದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ನಾನು ಮೊದಲಿನಿಂದಲೂ ಬಿಜೆಪಿ ಕಾರ್ಯಕರ್ತನಿದ್ದೇನೆ. ಕಾಂಗ್ರೆಸ್ ನಿಂದ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸಲು ಬ್ರಿಗೇಡ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ನಾನು ಬ್ರಿಗೇಡ್ ಸದಸ್ಯನಲ್ಲ. ಬಿಜೆಪಿಯಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುತ್ತಾ ಬರಲಾಗಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry