ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ತ್ರಿವಳಿ ತಲಾಖ್, ಅತ್ಯಾಚಾರ, ಭ್ರೂಣಹತ್ಯೆ ಹೆಚ್ಚಾಗಲು ಪಾಶ್ಚಿಮಾತ್ಯ ಸಂಸ್ಕೃತಿಯೇ ಕಾರಣ: ಇಂದ್ರೇಶ್ ಕುಮಾರ್

Last Updated 3 ಜೂನ್ 2017, 10:36 IST
ಅಕ್ಷರ ಗಾತ್ರ

ಮುಂಬೈ: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ತ್ರಿವಳಿ ತಲಾಖ್  ಪದ್ಧತಿ ಮೇಲೆ ವಿದೇಶಿ ಸಂಸ್ಕೃತಿಯು ಗಾಢವಾದ ಪ್ರಭಾವ ಬೀರಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ(ಆರ್‌ಎಸ್‌ಎಸ್‌)ಸಂಘದ ನಾಯಕ ಇಂದ್ರೇಶ್ ಕುಮಾರ್ ಆರೋಪಿಸಿದ್ದಾರೆ.

‘ಭಾರತದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸೆ, ಅತ್ಯಾಚಾರ ಹಾಗೂ ಭ್ರೂಣ ಹತ್ಯೆಗಳಿಗೂ ಪಾಶ್ಚಿಮಾತ್ಯ  ಸಂಸ್ಕೃತಿಯ ಅನುಕರಣೆಯೇ ಕಾರಣ’ ಎಂದು ಹೇಳಿದ್ದಾರೆ.

‘ಪ್ರೀತಿ ಪರಿಶುದ್ಧವಾದುದು. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ಇದರ ಪರಿಭಾಷೆ ಬದಲಾಗುತ್ತಿದೆ. ಇದೊಂದು ಉದ್ಯಮವಾಗಿ ಬದಲಾಗುತ್ತಿದೆ. ಅತ್ಯಾಚಾರ, ವಿಚ್ಛೇದನದಂತಹ ಕೃತ್ಯಗಳ ಹೆಚ್ಚಳಕ್ಕೆ ವಿದೇಶ ಸಂಸ್ಕೃತಿಯೇ ಕಾರಣ’ ಎಂದಿದ್ದಾರೆ.

ಜನರು ತಮ್ಮವರ ಮೇಲಿನ ಪ್ರೀತಿಯನ್ನು ಕೇವಲ ಪ್ರೇಮಿಗಳ ದಿನದಂದು ಮಾತ್ರ ವ್ಯಕ್ತಪಡಿಸುತ್ತಾರೆ. ಇಂತಹ ವಿದೇಶಿ ಸಂಸ್ಕೃತಿಗೆ ಜನರು ಮಾರು ಹೋದ ಕಾರಣ ದೇಶದಲ್ಲಿ ಹಿಂಸಾಕೃತ್ಯಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT