ಮಕ್ಕಳ ಪದ್ಯಗಳು

7

ಮಕ್ಕಳ ಪದ್ಯಗಳು

Published:
Updated:
ಮಕ್ಕಳ ಪದ್ಯಗಳು

ಸೊಕ್ಕಿನ ಬೆಕ್ಕುನಮ್ಮ ಮನೆಯ ಬೆಕ್ಕು

ಅದಕೆ ಬಹಳ ಸೊಕ್ಕು

ಅಡುಗೆ ಮನೆ ಹೊಕ್ಕು

ಕದ್ದು ಹಾಲು ನೆಕ್ಕು

ಪುಟ್ಟುಗಿಟ್ಟ ಹಾಲು

ಆಯ್ತು ಬೆಕ್ಕ ಪಾಲು

ಅಮ್ಮ ಬಂದು ನೋಡಲು

ಬಹಳ ಸಿಟ್ಟು ಬರಲು

ಕೈಗೆ ಬಂತು ಸೌಟು

ಬಿತ್ತು ಎರಡು ಪೆಟ್ಟು

ಕುಣಿದಾಡಿತು ಪುಟ್ಟು

ಇಳಿಯಿತು ಅಮ್ಮನ ಸಿಟ್ಟು

-ಪಿ. ಜಯವಂತ ಪೈ, ಕುಂದಾಪುರ

****


ಅಪ್ಪ–ಅಮ್ಮ ಬೈತಾರೆಮಾತೇ ಕೇಳಲ್ಲಂತ

ಅಪ್ಪ–ಅಮ್ಮ ಬೈತಾರೆ

ಮಕ್ಕಳ ಮಾತನ್ನ ಯಾವ

ಅಪ್ಪ–ಅಮ್ಮ ಕೇಳ್ತಾರೆ?

ಅಂಕ ಅಂಕ ಅನ್ನೋ ವಂಕಿ

ಹಿಡಿದೇ ಇರ್ತಾರೆ

ಜ್ವರ ಏರಿ ಮಲಕೊಂಡಿದ್ರು

ಓದು ಅಂತಾರೆ

ಹಾಡು ಕುಣಿತ

ಕುಂಚ ಬಣ್ಣ ಎಸೆದುಬಿಡ್ತಾರೆ

ಅ ಆ ಇ ಈ ಬಿಡಿಸಿ

ಎ ಬಿ ಸಿ ಡಿ ಬರಸ್ತಾರೆ

ಬೇಡದಿರುವ ಒಡವೆ

ವಸ್ತ್ರ ರಗಡು ತರ್ತಾರೆ

ತಿದ್ದು ತೀಡು ಅಂತ

ನಿತ್ಯ ಜೀವ ತಿಂತಾರೆ

ಮಣ್ಣಲ್ಲಿ ಆಟ ಆಡ್ತಾ ಇದ್ರೆ

ಎಳಕೊಂಡ ಹೋಗ್ತಾರೆ.

ಸಸಿ ನೆಡೋದ ಬಿಡ್ಸಿ

ಪರಿಸರ ಪಾಠ ಮಾಡ್ತಾರೆ.

ಅಪ್ಪ–ಅಮ್ಮ ಬೈತಾರೆ

ನೀವು ಬೈತೀರಾ ?

ಬಾಲ್ಯ ಕಳೆದು ಹೋದ್ಮೇಲೆ

ತಂದು ಕೊಡ್ತೀರಾ?

ವಿನಾಯಕ ರಾ. ಕಮತದ

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry