ಸೂರ್ಯ ಶಿಕಾರಿ

7

ಸೂರ್ಯ ಶಿಕಾರಿ

Published:
Updated:
ಸೂರ್ಯ ಶಿಕಾರಿ

ಮೂಡಣ ಬಾನಲಿ ಮೂಡುವ ಸೂರ್ಯನು

ಜಗವನು ಜಗಮಗ ಬೆಳಗುವನು

ಗಿಡಮರ ಹಸುರಿಗೆ ಜೀವವ ಕೊಡುವನು

ಕಿಲಕಿಲ ನಗುವನು ಹರಡುವನು

ಗೂಡಲಿ ಚಿಲಿಪಿಲಿ ಹಾಡುವ ಹಕ್ಕಿಯ

ಮೊಗದಲಿ ಕಾಂತಿಯ ಬರಿಸುವನು

ಹಕ್ಕಿಯ ಕೊರಳಿಗೆ ಸಕ್ಕರೆ ತುಂಬಿದ

ದನಿಯಲಿ ಇಂಪನು ತರಿಸುವನು

ಗಿಡಮರದೆಲೆಯಲಿ ಅಡುಗೆಯ ಮಾಡುತ

ನಾಡಿಗೆ ಉಸಿರನು ನೀಡುವನು

ಮನುಜನು ಮರಗಿಡ ಕಡಿಯುತ ಸಾಗಲು

ಶಾಖದಿ ಲೋಕವ ಕಾಡುವನು

ಮಾನವ ಅತೀವ ದುರಾಸೆ ಮನದಲಿ

ಪರಿಸರ ನಾಶವ ಮಾಡಿರಲು

ಹೀನತೆ ಮೆರೆಯುತ ಸ್ವಾರ್ಥತನದಲ್ಲಿ

ವಾತಾವರಣವ ಕೆಡಿಸಿರಲು

ಕೋಪದಿ ಸೂರ್ಯನು ಶಾಪದ ತೆರದಲಿ

ಶಾಖದ ತಾಪವ ಹಿಡಿಯುವನು

ಸೂರ್ಯನ ಶಾಖವ ಸಹಿಸಲು ಆಗದೆ

ಮರುಗುತ ಮಾನವ ಮಡಿಯುವನು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry