‘ಬ್ಲ್ಯಾಕ್ ಲೇಡಿ’ ಗೌರವ

7

‘ಬ್ಲ್ಯಾಕ್ ಲೇಡಿ’ ಗೌರವ

Published:
Updated:
‘ಬ್ಲ್ಯಾಕ್ ಲೇಡಿ’ ಗೌರವ

ಬಾಲಿವುಡ್‌ನಲ್ಲಿನ ಸಾಧಕರಿಗೆ ಕೊಡಮಾಡುವ ಹಳೆಯ ಪ್ರಶಸ್ತಿ ‘ಫಿಲ್ಮ್‌ಫೇರ್’.

‘ಟೈಮ್ಸ್ ಸಮೂಹ’ವು 1954ರಲ್ಲಿ ಈ ಪ್ರಶಸ್ತಿ ನೀಡಲಾರಂಭಿಸಿತು. ಆಗ ‘ಕ್ಲೇರ್ ಪ್ರಶಸ್ತಿ’ ಎಂದೇ ಕರೆಯುತ್ತಿದ್ದರು. ಅದಕ್ಕೂ ಹಿಂದಿನ ವರ್ಷ ನಿಧನರಾಗಿದ್ದ ಕ್ಲೇರ್ ಮೆಂಡೋನ್ಕ ಹೆಸರಿನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಾರಂಭಿಸಿದ್ದು.

ಎನ್.ಜಿ. ಪನ್ಸಾರೆ ಪ್ರಶಸ್ತಿಯ ಸ್ಮರಣಿಕೆಯ ಪ್ರತಿಮೆಯಾದ ‘ಬ್ಲ್ಯಾಕ್ ಲೇಡಿ’ಯನ್ನು ವಿನ್ಯಾಸಗೊಳಿಸಿದರು. ಕಂಚಿನಿಂದ ಮಾಡಿದ ಇದರ ತೂಕ 5 ಕೆ.ಜಿ. ಪ್ರಫುಲ್ಲ ನೃತ್ಯ ಭಂಗಿಯಲ್ಲಿರುವ ಲಲನೆಯ ಸಂಕೇತವಿದು.

25ನೇ ವರ್ಷದ ಸಮಾರಂಭಕ್ಕೆ ಮೆರುಗು ನೀಡಲು ಸ್ಮರಣಿಕೆಯನ್ನು ಬೆಳ್ಳಿಯಲ್ಲಿ ಹಾಗೂ 50ನೇ ವರ್ಷದ ಸಂಕೇತವಾಗಿ ಚಿನ್ನದಲ್ಲಿ ರೂಪಿಸಲಾಯಿತು. 2013ರಲ್ಲಿ ಚಿನ್ನದ ಗೆರೆಯೊಂದನ್ನು ಸೇರಿಸಲಾಯಿತು. ಭಾರತ ಚಿತ್ರರಂಗಕ್ಕೆ ನೂರು ತುಂಬಿದ ನೆನಪಿಗೆ ಹಾಗೆ ಮಾಡಿದ್ದು.

ಮೊದಲ ಸಮಾರಂಭದಲ್ಲಿ ಐದು ಪ್ರಶಸ್ತಿಗಳನ್ನು ಮಾತ್ರ ನೀಡಲಾಗಿತ್ತು. ಶ್ರೇಷ್ಠ ಚಿತ್ರ, ನಿರ್ದೇಶಕ, ನಟ, ನಟಿ ಹಾಗೂ ಸಂಗೀತ ನಿರ್ದೇಶಕರಿಗೆ ಪ್ರಶಸ್ತಿ ಸಂದಿತ್ತು.

‘ದೋ ಬಿಘಾ ಜಮೀನ್’ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆದ ಮೊದಲ ಸಿನಿಮಾ. ಅದರ ನಿರ್ದೇಶಕ ಬಿಮಲ್ ರಾಯ್ ಪ್ರಶಸ್ತಿಗೆ ಭಾಜನರಾದ ಮೊದಲ ನಿರ್ದೇಶಕ. ಆಮೇಲೆ ಅವರಿಗೆ ಇನ್ನೂ 6 ಫಿಲ್ಮ್‌ಫೇರ್ ಪ್ರಶಸ್ತಿಗಳು ಸಂದವು.

ಇಷ್ಟು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ಬಾಲಿವುಡ್‌ನ ಇನ್ನೊಬ್ಬ ನಿರ್ದೇಶಕ ಇಲ್ಲ. 1958ರಲ್ಲಿ ಅವರ ‘ಮಧುಮತಿ’ ಚಿತ್ರ 9 ಫಿಲ್ಮ್‌ಫೇರ್  ಪ್ರಶಸ್ತಿಗಳನ್ನು ಪಡೆದುಕೊಂಡಿತು. 37 ವರ್ಷಗಳ ದಾಖಲೆ ಇದು. ದಿಲೀಪ್ ಕುಮಾರ್, ಮೀನಾ ಕುಮಾರಿ ಹಾಗೂ ನೌಶಾದ್ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ಇತರರು.

2006ರಲ್ಲಿ ‘ಬ್ಲ್ಯಾಕ್’ ಚಿತ್ರಕ್ಕೆ 11 ಪ್ರಶಸ್ತಿಗಳು ಒಲಿದುಬಂದವು. ಇದುವರೆಗಿನ ದಾಖಲೆ ಇದು. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಎ.ಆರ್. ರೆಹಮಾನ್ ಹಾಗೂ ಗುಲ್ಜಾರ್ ತಲಾ ಹತ್ತು ಅಥವಾ ಅದಕ್ಕಿಂತ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry