ಸರಯೂ ನದಿಗೆ ಪ್ಲಾಸ್ಟಿಕ್‌ ಬಾಟಲಿ ಎಸೆದ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್‌

7
ಘೋಷಣೆಗಷ್ಟೇ ಸೀಮಿತವಾದ ‘ಸ್ವಚ್ಛ ಭಾರತ’

ಸರಯೂ ನದಿಗೆ ಪ್ಲಾಸ್ಟಿಕ್‌ ಬಾಟಲಿ ಎಸೆದ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್‌

Published:
Updated:
ಸರಯೂ ನದಿಗೆ ಪ್ಲಾಸ್ಟಿಕ್‌ ಬಾಟಲಿ ಎಸೆದ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್‌

ಗೊಂಡಾ: ಉತ್ತರಪ್ರದೇಶದ ಸರಯೂ ನದಿಯ ಸ್ವಚ್ಛತೆಯ ಪರಿಶೀಲನೆಗೆ ತೆರಳಿದ್ದ ಬಾರಾಬಂಕಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಪ್ರಿಯಾಂಕಾ ರಾವತ್‌ ಅವರು ನದಿಗೆ ಪ್ಲಾಸ್ಟಿಕ್‌ ಬಾಟಲಿ ಎಸೆದಿರುವುದು ವಿವಾದ ಸೃಷ್ಟಿಸಿದೆ.

ನದಿಗೆ ಬಾಟಲಿ ಎಸೆದಿರುವ ವಿಡಿಯೊ ವೈರಲ್‌ ಆಗಿದೆ. ನದಿಯ ಸ್ವಚ್ಛತೆಯ ಪರಿಶೀಲನೆ ನಡೆಸಲು ಹೊರಡುವ ವೇಳೆಯೇ ಪ್ರಿಯಾಂಕಾ ಅವರು ನದಿಗೆ ಬಾಟಲಿ ಎಸೆದಿರುವುದು ಹಲವರ ಟೀಕೆಗೆ ಗುರಿಯಾಗಿದೆ.

ಈ ವೇಳೆ ಉತ್ತರ ಪ್ರದೇಶದ ಜಲ ಸಂಪನ್ಮೂಲ ಸಚಿವ ಧರ್ಮಪಾಲ್‌ ಸಿಂಗ್‌ ಅವರೂ ಪ್ರಿಯಾಂಕಾ ಅವರ ಜತೆಗಿದ್ದರು. ಸ್ವಚ್ಛತೆಯ ಪರಿಶೀಲನೆ ನಡೆಸಿದ ಬಳಿಕ ಧರ್ಮಪಾಲ್‌ ಸಿಂಗ್‌ ಅವರು ನದಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ಭಾಷಣ ಮಾಡಿದರು. ಪ್ರಿಯಾಂಕಾ ಅವರ ನಡೆಯಿಂದ ಧರ್ಮಪಾಲ್‌ ಭಾಷಣ ಮಾಡುವ ವೇಳೆ ತೀವ್ರ ಮುಜುಗರಕ್ಕೆ ಒಳಗಾಗಬೇಕಾಯಿತು.

‘2019ರ ವೇಳೆಗೆ ದೇಶವನ್ನು ಸಂಪೂರ್ಣ ‘ಸ್ವಚ್ಛ ಭಾರತ’ವಾಗಿಸಬೇಕೆಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಾಗಿದೆ. ಈ ಕನಸಿಗೆ ಪ್ರಿಯಾಂಕಾ ತಣ್ಣೀರೆರೆಚಿದ್ದಾರೆ’ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry