ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮದ ಕಾಂತಿಗೆ ಕೊಬ್ಬರಿಎಣ್ಣೆ

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಕೊಬ್ಬರಿಎಣ್ಣೆ ಹಲವು ಬಗೆಯಲ್ಲಿ ಉಪಯೋಗಕಾರಿ. ಇದು ಕೂದಲಿನ ಸಮಸ್ಯೆಗೆ ಮಾತ್ರವೇ ಸೀಮಿತವಲ್ಲ. ಕೊಬ್ಬರಿಎಣ್ಣೆ ಬಳಸುವ ಮೂಲಕ ಚರ್ಮದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 

* ಒಣ ಚರ್ಮದವರು ಕೊಬ್ಬರಿಎಣ್ಣೆ ಬಳಸುವುದರಿಂದ ಚರ್ಮದ ಶುಷ್ಕತೆಯಿಂದ ಮುಕ್ತಿ ಪಡೆಯಬಹುದು.
*ಕೊಬ್ಬರಿಎಣ್ಣೆಯ ಜೊತೆಗೆ ಅರಿಶಿಣ ಮತ್ತು ಕಾಯಿ ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ.
* ಪ್ರತಿದಿನ ಬಿಸಿಲಿಗೆ ಹೋಗುವ ಮೊದಲು ಕೈ, ಕಾಲಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಸನ್‌ಬರ್ನ್‌ನಿಂದ ಮುಕ್ತಿ ಪಡೆಯಬಹುದು.
* ರಾತ್ರಿ ಮಲಗುವ ಮುನ್ನ ಮೈಗೆ ಕೊಬ್ಬರಿಎಣ್ಣೆ ಲೇಪಿಸಿಕೊಂಡರೆ ಚರ್ಮ ಮೃದುವಾಗುತ್ತದೆ.
*ಕಣ್ಣು ಮತ್ತು ಮುಖದ ಮೇಕಪ್‌ ತೆಗೆಯಲು ಕೊಬ್ಬರಿಎಣ್ಣೆ ಬಳಸುವುದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ.
* ಕೊಬ್ಬರಿಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಮೂಲಂಗಿ ರಸ, ಸೌತೆಕಾಯಿ ರಸವನ್ನು ಸ್ವಲ್ಪ ಬೆಚ್ಚಗಿರುವಾಗಲೇ ಸೇರಿಸಿ ಮುಖಕ್ಕೆ ಮಾಲೀಶ್‌ ಮಾಡಬೇಕು. ಒಂದು ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಸುಕ್ಕುಗಳು ನಿಯಂತ್ರಣಕ್ಕೆ ಬರುತ್ತವೆ.
* ಹದಿನೈದು ದಿನಕ್ಕೊಮ್ಮೆ ಬಿಸಿ ಮಾಡಿದ ಕೊಬ್ಬರಿಎಣ್ಣೆಗೆ ಸ್ವಲ್ಪ ಅರಿಶಿಣ ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚಿ, ಸನ್‌ಬರ್ನ್‌ ನಿವಾರಣೆಯಾಗುತ್ತದೆ.
* ಮಕ್ಕಳಿಗೆ ಡೈಪರ್‌ ಹಾಕಿ ರ್‍ಯಾಶಸ್‌ ಆಗಿದ್ದರೆ, ಆ ಜಾಗಕ್ಕೆ ಕೊಬ್ಬರಿಎಣ್ಣೆ ಸವರಿ. ರ್‍ಯಾಶಸ್‌ ಕಡಿಮೆಯಾಗುತ್ತದೆ.
* ಜೇನುತುಪ್ಪ, ಕೊಬ್ಬರಿಎಣ್ಣೆಯ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷದ ನಂತರ ಮುಖ ತೊಳೆಯುವುದರಿಂದ ಚರ್ಮದ ತಾಜಾತನ ಉಳಿಯುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT