ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಕ್ಕೆ ಶೇಕಡ 3, ಸಂಸ್ಕರಿಸಿದ ಆಹಾರಕ್ಕೆ ಶೇಕಡ 5ರಷ್ಟು ಜಿಎಸ್‌ಟಿ ದರ ನಿಗದಿ

Last Updated 3 ಜೂನ್ 2017, 14:33 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಕೇಂದ್ರ ಸರ್ಕಾರ ಶನಿವಾರ ಅಂತಿಮಗೊಳಿಸಿದೆ. ಚಿನ್ನದ ಮೇಲೆ ಶೇಕಡ 3ರಷ್ಟು ಜಿಎಸ್‌ಟಿ ದರ ವಿಧಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ.

ನವದೆಹಲಿಯಲ್ಲಿ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ 15ನೇ ಸಭೆಯಲ್ಲಿ ಚಿನ್ನ, ಸಂಸ್ಕರಿಸಿದ ಆಹಾರ, ಸಿದ್ಧ ಉಡುಪು, ಪಾದರಕ್ಷೆ, ಬೀಡಿ ಸೇರಿದಂತೆ ಹಲವು ಉತ್ಪನ್ನಗಳ ಜಿಎಸ್‌ಟಿ ದರವನ್ನು ಅಂತಿಮಗೊಳಿಸಲಾಗಿದೆ.

ಈ ಹಿಂದೆ ನಿಗದಿಗೊಳಿಸಿದ್ದ ನಾಲ್ಕು ವರ್ಗಗಳನ್ನು (5%, 12%, 18% ಮತ್ತು 28%) ಬಿಟ್ಟು ಚಿನ್ನಕ್ಕೆ ಹೊಸ ವರ್ಗದ (3%) ದರ ನಿಗದಿಗೊಳಿಸಲಾಗಿದೆ.

ಸಂಸ್ಕರಿಸಿದ ಆಹಾರಕ್ಕೆ ಶೇಕಡ 5ರಷ್ಟು, ಬಿಸ್ಕತ್‌ ಮೇಲೆ ಶೇಕಡ 18ರಷ್ಟು, ಬೀಡಿಗೆ ಶೇಕಡ 28ರಷ್ಟು ಜಿಎಸ್‌ಟಿ ದರ ನಿಗದಿಪಡಿಸಲಾಗಿದೆ.

₹ 500ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳ ಜಿಎಸ್‌ಟಿ ದರ ಶೇ 5ರಷ್ಟು ಇರಲಿದೆ. ₹ 500ಕ್ಕಿಂತ ಹೆಚ್ಚಿನ ಬೆಲೆಯ ಪಾದರಕ್ಷೆಗಳ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ದರ ನಿಗದಿಯಾಗಿದೆ.

ಸಿದ್ಧ ಉಡುಪುಗಳ ಮೇಲೆ ಶೇಕಡ 12, ಹತ್ತಿ ಬಟ್ಟೆ ಮತ್ತು ಸೋಲಾರ್‌ ಪ್ಯಾನೆಲ್‌ಗಳ ಮೇಲೆ ಶೇಕಡ 5ರಷ್ಟು ಜಿಎಸ್‌ಟಿ ದರ ನಿಗದಿಗೊಳಿಸಲಾಗಿದೆ.

ಜಿಎಸ್‌ಟಿ ಮಂಡಳಿಯ ಮುಂದಿನ ಸಭೆ ಜೂನ್‌ 11ಕ್ಕೆ ನಡೆಯಲಿದೆ. ಜುಲೈ 1ರಿಂದ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT