ಆದಿತ್ಯನಾಥ ಯೋಗಿಗೆ 16 ಅಡಿ ಉದ್ದದ ಸೋಪು ಕಳಿಸಲು ದಲಿತ ಸಂಘಟನೆ ನಿರ್ಧಾರ

7

ಆದಿತ್ಯನಾಥ ಯೋಗಿಗೆ 16 ಅಡಿ ಉದ್ದದ ಸೋಪು ಕಳಿಸಲು ದಲಿತ ಸಂಘಟನೆ ನಿರ್ಧಾರ

Published:
Updated:
ಆದಿತ್ಯನಾಥ ಯೋಗಿಗೆ 16 ಅಡಿ ಉದ್ದದ ಸೋಪು ಕಳಿಸಲು ದಲಿತ ಸಂಘಟನೆ ನಿರ್ಧಾರ

ಅಹಮದಾಬಾದ್:  ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರನ್ನು ಭೇಟಿ ಮಾಡುವ ಮುನ್ನ ಸ್ನಾನ ಮಾಡಿಕೊಂಡು ಬನ್ನಿ ಎಂದು ಖುಷಿನಗರ ಜಿಲ್ಲೆಯ ದಲಿತರಿಗೆ ಸೋಪು ಮತ್ತು ಶ್ಯಾಂಪು ಪ್ಯಾಕೆಟ್‍ಗಳನ್ನು ವಿತರಿಸಲಾಗಿತ್ತು. ಆದಿತ್ಯನಾಥ ಅವರ ಈ ನಡವಳಿಕೆಯನ್ನು ಖಂಡಿಸಿ ಗುಜರಾತಿನ ದಲಿತ ಸಂಘಟನೆಯೊಂದು ಉತ್ತರಪ್ರದೇಶ ಮುಖ್ಯಮಂತ್ರಿ ಅವರಿಗೆ 16 ಅಡಿ ಉದ್ದದ ಸೋಪು ಕಳಿಸಲು ನಿರ್ಧರಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌  ಪತ್ರಿಕೆ ವರದಿ ಮಾಡಿದೆ.

ದಲಿತರನ್ನು ಭೇಟಿ ಮಾಡಲು ಬರುವ ಮುನ್ನ ಆದಿತ್ಯನಾಥ ಅವರು ಈ ಸೋಪಿನಿಂದ ಸ್ನಾನ ಮಾಡಿಕೊಂಡು ಬರಲಿ ಎಂದು  ಗುಜರಾತಿನ ಡಾ. ಅಂಬೇಡ್ಕರ್ ವೆಚನ್ ಪ್ರತಿಬಂಧ್ ಸಮಿತಿ ಹೇಳಿದೆ.

ಆದಿತ್ಯನಾಥ ಯೋಗಿ ಅವರ ಧೋರಣೆ ನೋಡಿದರೆ ಅವರೊಬ್ಬ ಮನುವಾದಿ. ಹಾಗಾಗಿ ಅವರು ದಲಿತರನ್ನು ಭೇಟಿ ಮಾಡುವ ಮುನ್ನ ಆ ಕೊಳೆಯನ್ನು ತೊಳದುಕೊಂಡು ಬರಲಿ ಎಂದು ಸಮಿತಿ ಸದಸ್ಯ ಕೃತಿ ರಾಥೋಡ್ ಮತ್ತು ಕಾಂತಿಲಾಲ್ ಪರಾಮರ್ ಹೇಳಿದ್ದಾರೆ.

ಅಹಮದಾಬಾದ್ ಮೂಲದ ಎನ್‍ಜಿಒ ನವ್ಸರ್ಜನ್ ಜತೆ ಸೇರಿ ದಲಿತ ಸಂಘಟನೆ ಈ ಸೋಪು ತಯಾರಿಸಲಿದೆ.

ಸೋಪನ್ನು ದಲಿತ ಸಮುದಾಯದಲ್ಲಿ ಅತೀ ಕೆಳಮಟ್ಟದಲ್ಲಿರುವವರು ಎಂದು ಪರಿಗಣಿಸಲಾಗುತ್ತಿರುವ ಬಾಲ್ಮಿಕಿ ಜಾತಿಯ ಮಹಿಳೆಯೊಬ್ಬರು ತಯಾರಿಸಲಿದ್ದಾರೆ. ಆದಾಗ್ಯೂ, 16 ಅಡಿ ಉದ್ದವಿರುವ ಸೋಪು ಯಾಕೆ ಎಂಬುದರ ಬಗ್ಗೆ ಸಮಿತಿ ವಿವರಣೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry