ಕುಂಬ್ಳೆ ಜತೆ ವಿರಸ ಇಲ್ಲ, ಜನರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ: ವಿರಾಟ್ ಕೊಹ್ಲಿ

7

ಕುಂಬ್ಳೆ ಜತೆ ವಿರಸ ಇಲ್ಲ, ಜನರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ: ವಿರಾಟ್ ಕೊಹ್ಲಿ

Published:
Updated:
ಕುಂಬ್ಳೆ ಜತೆ ವಿರಸ ಇಲ್ಲ, ಜನರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ: ವಿರಾಟ್ ಕೊಹ್ಲಿ

ಬರ್ಮಿಂಗ್‌ಹ್ಯಾಮ್ : ಭಾರತ ತಂಡದ ಕೋಚ್ ಅನಿಲ್ ಕುಂಬ್ಳೆ ಮತ್ತು ನನ್ನ ನಡುವೆ ಯಾವುದೇ ಸಮಸ್ಯೆಗಳಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕುಂಬ್ಳೆ ಜತೆ ವಿರಸ ಇಲ್ಲ, ಜನರು ಸುಮ್ ಸುಮ್ನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿಯ ಸುದ್ದಿಗಳನ್ನು ಹಬ್ಬಿಸಿ ಜನರು ನೆಮ್ಮದಿ ಕೆಡಿಸುತ್ತಿದ್ದಾರೆ. ಅನಿಲ್ ಕುಂಬ್ಳೆ ಅವರ ಜತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ ಕೊಹ್ಲಿ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆಯಲಿದೆ.

ಕುಂಬ್ಳೆ ಜತೆಗೆ ಸಮಸ್ಯೆ ಇದೆ ಎಂಬ ಸುದ್ದಿ ಇದೆ. ಈ ಸಮಸ್ಯೆಯನ್ನು ನೀವು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಸಮಸ್ಯೆಯೇ ಇಲ್ಲದಿರುವಾಗ ನಿಭಾಯಿಸುವುದು ಏನನ್ನು? ಭಾರತದಲ್ಲಿ ಜನರು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಹೆಚ್ಚು ಅನುಮಾನದಿಂದ ನೋಡುತ್ತಾರೆ. ನಾನು ಹೇಳುವುದು ಇಷ್ಟೇ. ಕ್ರಿಕೆಟ್ ಅಂಗಣದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಮಾತ್ರ ನಾವು ಯೋಚಿಸುತ್ತಿದ್ದೇವೆ. ಒಬ್ಬ ಕ್ರಿಕೆಟರ್ ಆಗಿ ನಾನೀಗ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry