ಕಾರವಾರದಲ್ಲಿ 7 ಸೆಂ.ಮೀ. ಮಳೆ

7

ಕಾರವಾರದಲ್ಲಿ 7 ಸೆಂ.ಮೀ. ಮಳೆ

Published:
Updated:
ಕಾರವಾರದಲ್ಲಿ 7 ಸೆಂ.ಮೀ. ಮಳೆ

ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗಿದೆ.

ಕಾರವಾರ ಮತ್ತು ಆಗುಂಬೆಯಲ್ಲಿ 7 ಸೆಂ.ಮೀ. ಮಳೆಯಾಗಿದೆ.  ಮಂಗಳೂರಿನಲ್ಲಿ  6 ಸೆಂ.ಮೀ, ಉಡುಪಿಯ ಕಾರ್ಕಳದಲ್ಲಿ 4 ಸೆಂ.ಮೀ,  ಮೂಡುಬಿದಿರೆ, ಉಡುಪಿಯ ಕೋಟ, ಕೊಲ್ಲೂರು, ಸಿದ್ದಾಪುರ, ಮಲೆಮಹದೇಶ್ವರ ಬೆಟ್ಟ, ಭರಮಸಾಗರದಲ್ಲಿ ತಲಾ 3 ಸೆಂ.ಮೀ., ಕೊಪ್ಪಳದ ಬೇವೂರು, ಭಾಗಮಂಡಲ, ನಾಪೊಕ್ಲು, ಹೊಸನಗರ, ಕೊಟ್ಟಿಗೆಹಾರ, ಕಮ್ಮರಡಿ, ಕೋಲಾರದ ರಾಯಲಪಡುನಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆ ಹಾಗೂ ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಡಿಲು ಬಡಿದು ಮೂವರ ಸಾವು

ಔರಾದ್/ಯಾದಗಿರಿ:
ಶನಿವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಔರಾದ್‌ ತಾಲ್ಲೂಕಿನಲ್ಲಿ ಇಬ್ಬರು ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ ಒಬ್ಬರು ಸಿಡಿಲು ಬಡಿದು ಮೃತಪಟ್ಟದ್ದಾರೆ.

ಗೋದಾವರಿ ಜಗನ್ನಾಥ (45),  ಸಂತೋಷ ವಿಠಲರಾವ ಪವಾರ್ (30) ಮತ್ತು ಯಾದಗಿರಿ ಸಮೀಪದ ಬೆಟ್ಟದಹಳ್ಳಿ ಯಲ್ಲಿ ಶನಿವಾರ ಸಿಡಿಲು ಬಡಿದು ಹಜ್ಯಾ ನಾಯ್ಕ ರಾಠೋಡ (65) ರೈತ ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry