ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಸೂಚನೆ ಚಲನಚಿತ್ರ ಪ್ರಶಸ್ತಿ ವಾಪಸ್

Last Updated 3 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್‌ ನೀಡಿದ ಸೂಚನೆಯಂತೆ 2009-10ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಪೈಕಿ ಪುನೀತ್ ರಾಜ್‌ಕುಮಾರ್ ಅಭಿನಯದ ‘ರಾಜ್’ ಚಲನಚಿತ್ರಕ್ಕೆ ಕೊಡಮಾಡಿದ್ದ ನಾಲ್ಕು ಪ್ರಶಸ್ತಿಗಳನ್ನು ಸರ್ಕಾರ ವಾಪಸ್‌ ಪಡೆದಿದೆ.

‘ರಾಜ್’ ಚಿತ್ರಕ್ಕೆ ವಿ. ಹರಿಕೃಷ್ಣ ಅವರಿಗೆ ನೀಡಲಾಗಿದ್ದ ‘ಅತ್ಯುತ್ತಮ ಸಂಗೀತ ನಿರ್ದೇಶಕ’, ಶ್ರೀನಿವಾಸ್ ಬಾಬು ಅವರಿಗೆ ನೀಡಲಾಗಿದ್ದ ‘ಅತ್ಯುತ್ತಮ ಸಂಕಲನಕಾರ’, ಟಿಪ್ಪು ಅವರಿಗೆ ನೀಡಲಾಗಿದ್ದ ‘ಅತ್ಯುತ್ತಮ ಹಿನ್ನೆಲೆ ಗಾಯಕ’ ಪ್ರಶಸ್ತಿ ಹಿಂದಕ್ಕೆ ಪಡೆಯಲಾಗಿದೆ.

ಶ್ರೀನಗರ ಕಿಟ್ಟಿ ನಟಿಸಿದ ‘ಒಲವೇ ಜೀವನ ಲೆಕ್ಕಚಾರ’ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ನೀಡಲಾಗಿದ್ದ ‘ಅತ್ಯುತ್ತಮ ಕಥೆ ಬರಹಗಾರ’ ಪ್ರಶಸ್ತಿಯನ್ನೂ ವಾಪಸ್‌ ಪಡೆಯಲಾಗಿದೆ.

ಹರಿಕೃಷ್ಣ, ಶ್ರೀನಿವಾಸ್ ಬಾಬು ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಪ್ರಶಸ್ತಿ ಜೊತೆಗೆ ನೀಡಲಾಗಿದ್ದ ಪ್ರಶಸ್ತಿ ಫಲಕ, ಪದಕ, ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ಹಿಂಪಡೆಯಲಾಗಿದೆ. ಆದರೆ, ಟಿಪ್ಪು ಅವರು ಪ್ರಶಸ್ತಿ ಪತ್ರ ಕಳೆದು ಹೋಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT