ಪಿಯು ಉಪನ್ಯಾಸಕ ಹುದ್ದೆ ಶುಲ್ಕ ಪಾವತಿಸಲು ಸೂಚನೆ

7

ಪಿಯು ಉಪನ್ಯಾಸಕ ಹುದ್ದೆ ಶುಲ್ಕ ಪಾವತಿಸಲು ಸೂಚನೆ

Published:
Updated:
ಪಿಯು ಉಪನ್ಯಾಸಕ ಹುದ್ದೆ ಶುಲ್ಕ ಪಾವತಿಸಲು ಸೂಚನೆ

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ 2015ರಲ್ಲಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿ ಮಾಡದವರು ಜೂನ್ 5ರಿಂದ 10ರೊಳಗೆ ಗಣಕೀಕೃತ ಅಂಚೆ ಕಚೇರಿಗಳಲ್ಲಿ ಶುಲ್ಕ ಪಾವತಿಸಲು ಸೂಚಿಸಲಾಗಿದೆ.

2015ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿ, 1,204 ಹುದ್ದೆಗಳ ನೇಮಕಾತಿಗೆ ಕಳೆದ ಮಾರ್ಚ್‌ನಲ್ಲಿ ಮತ್ತೊಮ್ಮೆ ಅಧಿಸೂಚನೆ ಹೊರಡಿಸಿತ್ತು. 

2015ರಲ್ಲಿ ಮತ್ತು ಈಗ ಹೊಸದಾಗಿ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‌ಸೈಟ್‌ನಲ್ಲಿ (http://kea.kar.nic.in) ಪ್ರಕಟಿಸಿದೆ.

ಅರ್ಜಿಯಲ್ಲಿ ಯಾವುದೇ ಮಾಹಿತಿಯನ್ನು ತಪ್ಪಾಗಿ ನಮೂದಿಸಿದ್ದರೆ ಅದನ್ನು ಆನ್‌ಲೈನ್‌ ಮೂಲಕವೇ ಸರಿಪಡಿಸಲು ಜೂನ್ 11ರಿಂದ 20ರವರೆಗೆ ಅವಕಾಶ ಕಲ್ಪಿಸಲಾಗಿದೆ.

2015ರ ಅಧಿಸೂಚನೆಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿತ್ತು. ಆದರೀಗ ಎಂಟು ಜಿಲ್ಲೆಗಳಲ್ಲಿ ಮಾತ್ರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಯಾವ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯುತ್ತದೋ, ಅದರಲ್ಲಿ ಒಂದು ಕೇಂದ್ರ ನಮೂದಿಸುವಂತೆ ಪ್ರಾಧಿಕಾರದ ಪ್ರಕಟಣೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry