ಸಕಾರಾತ್ಮಕ ಹಾದಿಯಲ್ಲಿ ದೇಶದ ಷೇರುಪೇಟೆ

7

ಸಕಾರಾತ್ಮಕ ಹಾದಿಯಲ್ಲಿ ದೇಶದ ಷೇರುಪೇಟೆ

Published:
Updated:
ಸಕಾರಾತ್ಮಕ ಹಾದಿಯಲ್ಲಿ ದೇಶದ ಷೇರುಪೇಟೆ

ಮುಂಬೈ : ದೇಶದ ಷೇರುಪೇಟೆವಹಿವಾಟು ಸತತ ನಾಲ್ಕನೇ ವಾರವೂ ಉತ್ತಮ ಗಳಿಕೆಯೊಂದಿಗೆ ಅಂತ್ಯಗೊಂಡಿದೆ.

ಮುಂಗಾರು, ತ್ರೈಮಾಸಿಕ ಫಲಿತಾಂಶ, ಹೂಡಿಕೆ ಪ್ರಮಾಣ, ಆರ್ಥಿಕ ಪ್ರಗತಿ... ಹೀಗೆ ಹಲವು ಅಂಶಗಳು ಶುಕ್ರವಾರಕ್ಕೆ ಅಂತ್ಯವಾದ ವಾರದ ವಹಿವಾಟಿನ ಮೇಲೆ ಪ್ರಭಾವ ಬೀರಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 245 ಅಂಶ ಏರಿಕೆ ಕಂಡು 31,273 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ  (ಎನ್‌ಎಸ್‌ಇ) ನಿಫ್ಟಿ 58 ಅಂಶ ಹೆಚ್ಚಾಗಿ   ಗರಿಷ್ಠ ಮಟ್ಟವಾದ 9,653 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಕಂಡಿತು.

ಜಿಡಿಪಿ ಪ್ರಭಾವ: 206–17ನೇ ಆರ್ಥಿಕ ವರ್ಷದ ಜಿಡಿಪಿ ಅಂಕಿ–ಅಂಶವು ಸೂಚ್ಯಂಕಗಳ ಅಲ್ಪ ಇಳಿಕೆಗೆ ಕಾರಣವಾಯಿತು.

ಮೂಲಸೌಕರ್ಯ ವಲಯದ 8 ಕೈಗಾರಿಕೆಗಳು ಮತ್ತು ತಯಾರಿಕಾ ವಲಯದ ಬೆಳವಣಿಗೆ ಕುಂಠಿತವಾಗಿರುವುದು ಸಹ ಸೂಚ್ಯಂಕದ ಏರುಮುಖ ಚಲನೆಗೆ ತುಸು ಕಡಿವಾಣ ಹಾಕಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry