ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳ ಅನಿಸಿಕೆ

Last Updated 3 ಜೂನ್ 2017, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿ ಸಹಾಯನಿಧಿ ತುಂಬಾ ನೆರವಾಗಿದೆ. ಕಾಲೇಜು ಶುಲ್ಕ ಪಾವತಿಸಲು ಮತ್ತು ಶೈಕ್ಷಣಿಕ ಸಾಮಗ್ರಿ ಖರೀದಿಸಲು ಉಪಯೋಗವಾಯಿತು. ಪ್ರಥಮ ಪಿಯುಸಿಯಲ್ಲಿ ಶೇ 92 ಅಂಕ ಸಿಕ್ಕಿದೆ. ಬಡವರಿಗೆ ನೆರವಾಗುವ ಒಳ್ಳೆಯ ಯೋಜನೆ ಇದು. ಪತ್ರಿಕೆಗೆ ತುಂಬು ಕೃತಜ್ಞತೆ ಅರ್ಪಿಸುತ್ತೇನೆ.
-ಪ್ರಶಾಂತ್‌ ನಾಗೇಂದ್ರ, ತಾವರಗೇರಾ, ಕುಷ್ಟಗಿ ತಾಲ್ಲೂಕು, ಕೊಪ್ಪಳ ಜಿಲ್ಲೆ

*


ಮರಿಮಲ್ಲಪ್ಪ ವಿಜ್ಞಾನ ಕಾಲೇಜಿಗೆ ಪ್ರವೇಶ ಪಡೆದಿದ್ದೆ, ‘ಪ್ರಜಾವಾಣಿ– ಡೆಕ್ಕನ್‌ಹೆರಾಲ್ಡ್’ ನೀಡಿದ ಆರ್ಥಿಕ ನೆರವಿನಿಂದ ಟ್ಯೂಷನ್‌ ಪಡೆಯಲು, ಪುಸ್ತಕ ಕೊಳ್ಳಲು ಅನುಕೂಲವಾಯಿತು. ಪಿಯು ಪ್ರಥಮ ವರ್ಷದಲ್ಲಿ ಶೇ 85 ಅಂಕಗಳಿಸಿದ್ದೇನೆ. ದ್ವಿತೀಯ ಪಿಯುಸಿಯಲ್ಲಿ ಇನ್ನೂ ಹೆಚ್ಚು ಅಂಕಗಳಿಸಿ ಎಂಜಿನಿಯರ್‌ ಆಗುವೆ.
-ಎಸ್‌.ಸೋನಾಲಿ,ವಿದ್ಯಾರಣ್ಯಪುರಂ, ಮೈಸೂರು

*


ಪ್ರಜಾವಾಣಿ ಸಹಾಯಧನ ನೀಡಿದ ಕಾರಣ ನಾನು ಮಂಡ್ಯದ ಸೇಂಟ್‌ ಜಾನ್‌ಅಂತಹ ಪ್ರತಿಷ್ಠಿತ ಕಾಲೇಜಿನಲ್ಲಿ ಓದಲು ಸಾಧ್ಯವಾಯಿತು. ಪ್ರಜಾವಾಣಿ ಪತ್ರಿಕೆಯ ಸಹಾಯ ಪಡೆದಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ಓದಿ ದೊಡ್ಡವನಾದ ಮೇಲೆ ನಾನು ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುತ್ತೇನೆ.
-ಎಚ್‌.ಎಂ.ಪ್ರಜ್ವಲ್‌ಗೌಡ, ಮಂಡ್ಯ

*


ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದು ಪಾಸಾದಾಗ, ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಆ ಸಂದರ್ಭದಲ್ಲಿ ಸಹಾಯಧನ ದೊರೆತು  ಸಹಕಾರಿಯಾಗಿದೆ. ಈಗ ಪ್ರಥಮ ಪಿಯುಸಿಯಲ್ಲಿ (ಪಿ.ಸಿ.ಎಂ.ಬಿ) ಶೇ 93.50 ಅಂಕ ಪಡೆದಿದ್ದೇನೆ.
-ಸಹನಾ ಜೊಂಜಾಳೆ, ಇಟಗಿ, ಬೆಳಗಾವಿ ಜಿಲ್ಲೆ

*


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT