ಕರುಣಾನಿಧಿಗೆ 94ರ ಸಂಭ್ರಮ

7

ಕರುಣಾನಿಧಿಗೆ 94ರ ಸಂಭ್ರಮ

Published:
Updated:
ಕರುಣಾನಿಧಿಗೆ 94ರ ಸಂಭ್ರಮ

ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರು ಜೂನ್‌ 3ಕ್ಕೆ 94ನೇ ವಯಸ್ಸಿಗೆ ಕಾಲಿಟ್ಟಿದ್ದು, ಶಾಸಕರಾಗಿ 60 ವರ್ಷಗಳನ್ನು ಪೂರೈಸಿದ್ದಾರೆ.

ಈ ಜಂಟಿ ಸಂಭ್ರಮವನ್ನು ಆಚರಿಸಲು ಪಕ್ಷವು ಸಂತೋಷ ಕೂಟ ಆಯೋಜಿಸಿತ್ತು. ಆದರೆ ಕರುಣಾ ನಿಧಿ ಅನಾರೋಗ್ಯದಿಂದ ನಿತ್ರಾಣರಾಗಿರುವುದರಿಂದ ಅವರ ಅನುಪ ಸ್ಥಿತಿಯಲ್ಲೇ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಸಿಪಿಐ, ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್‌ ಮುಖಂಡರು ಭಾಗವಹಿಸಿದ್ದರು.

ಇದಕ್ಕೆ ಮುನ್ನ ರಾಹುಲ್‌ ಹಾಗೂ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌  ಪ್ರತ್ಯೇಕವಾಗಿ ಸುಮಾರು 30 ನಿಮಿಷಮಾತುಕತೆ ನಡೆಸಿದರು.

ಡಿಎಂಕೆ ಜೊತೆಗಿನ ಕಾಂಗ್ರೆಸ್‌ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಹುಲ್‌ ಭೇಟಿ ಮಹತ್ವ ಪಡೆದುಕೊಂಡಿದೆ. ಸೋನಿಯಾ ಗಾಂಧಿ ಸೇರಿದಂತೆ ಹಲವರು ದೂರವಾಣಿ ಮೂಲಕ ಶುಭ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry