ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದಲ್ಲಿ ಐಎಸ್‌ ಕಾಲೂರಲು ಬಿಟ್ಟಿಲ್ಲ’

Last Updated 3 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತವು ಹೆಚ್ಚು ಮುಸ್ಲಿಮರಿರುವ ವಿಶ್ವದ ಎರಡನೇ ದೊಡ್ಡ ರಾಷ್ಟ್ರವಾದರೂ, ಇಸ್ಲಾಮಿಕ್ ಸ್ಟೇಟ್‌ (ಐಎಸ್) ಉಗ್ರ ಸಂಘಟನೆ ಇಲ್ಲಿಗೆ ಕಾಲಿಡುವುದನ್ನು ತಪ್ಪಿಸಿದ್ದೇವೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

‘2015 ಮತ್ತು 2016ರಲ್ಲಿ ಪಂಜಾಬ್‌ನಲ್ಲಿ ಉಗ್ರರು ನಡೆಸಿದ ಎರಡು ದಾಳಿಗಳನ್ನು ಬಿಟ್ಟರೆ, ದೇಶದಾದ್ಯಂತ ಭದ್ರತಾ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲೇ ಇತ್ತು. ಐಎಸ್ ಬಗ್ಗೆ ಅನುಕಂಪ ಹೊಂದಿದ್ದ 90 ಜನರನ್ನು ಬಂಧಿಸಿದ್ದೇವೆ. ರಾಜ್ಯ ಮತ್ತು ರಾಷ್ಟ್ರದ ಭದ್ರತಾ ಸಂಸ್ಥೆಗಳ ನಡುವಣ ಸಹಕಾರದಿಂದಲೇ ಇದೆಲ್ಲಾ ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

ಉಗ್ರರ ನಿಗ್ರಹ ಪರಿಣಾಮಕಾರಿ
*2011–16ರ ನಡುವೆ ಯುಪಿಎ ಸರ್ಕಾರದ ಅವಧಿಯಲ್ಲಿ ಹತ್ಯೆ ಮಾಡಲಾಗಿದ್ದ ಉಗ್ರರ ಸಂಖ್ಯೆ -239
*2014–17ರ ನಡುವೆ ವಿವಿಧ ಕಾರ್ಯಾಚರಣೆಗಳಲ್ಲಿ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ- 369
* 2016ರ ಮೊದಲ 8 ತಿಂಗಳಿಗೆ ಹೋಲಿಸಿದರೆ, ನಿರ್ದಿಷ್ಟ ದಾಳಿಯ ನಂತರ (2016 ಸೆಪ್ಟೆಂಬರ್‌ನಿಂದ ಈವರೆಗೆ) ಪಾಕಿಸ್ತಾನದ ಕಡೆಯಿಂದ ಒಳನುಸುಳುವಿಕೆಯಲ್ಲಿ ಆದ ಇಳಿಕೆ ಪ್ರಮಾಣ- 45%
* 2011–14ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಪಡೆದಿದ್ದ ಯುವಕರ ಸಂಖ್ಯೆ -1,900
* 2011–2014ರಲ್ಲಿ ಸರ್ಕಾರದ ವಿವಿಧ ಯೋಜನೆಗಳ ವತಿಯಿಂದ ಉದ್ಯೋಗ ಪಡೆದುಕೊಂಡಿದ್ದ ಯವಕರ ಸಂಖ್ಯೆ-1,592
* 2014–17ರಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಪಡೆದಿರುವ ಯುವಕರ ಸಂಖ್ಯೆ-20,355
* 2014–17ರಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಉದ್ಯೋಗ ಪಡೆದುಕೊಂಡ ಯವಕರ ಸಂಖ್ಯೆ-30,175

‘ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಯುವಕರು ಸಮಾಜಘಾತುಕ ಸಂಘಟನೆಗಳನ್ನು ಸೇರದಂತೆ ತಡೆಯಲಾಗಿದೆ’.

ನಕ್ಸಲರ ನಿಗ್ರಹಕ್ಕೆ ಅಭಿವೃದ್ಧಿ ಮಂತ್ರ
‘ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಮೂಲಕ ನಕ್ಸಲರ ಸೊಂಟ ಮುರಿದಿದ್ದೇವೆ’.

* ಹೊಸದಾಗಿ ಅಳವಡಿಸಲಾದ ಮೊಬೈಲ್‌ ಸಂಪರ್ಕ ಗೋಪುರಗಳು- 2,000
* ಅಳವಡಿಕೆ ಕಾರ್ಯ ಪ್ರಗತಿಯಲ್ಲಿರುವ  ಮೊಬೈಲ್ ಸಂಪರ್ಕ ಗೋಪುರಗಳ ಸಂಖ್ಯೆ- 2,882
* ಹೊಸದಾಗಿ ತೆರೆಯಲಾದ ಬ್ಯಾಂಕ್ ಶಾಖೆಗಳು -358
* ಹೊಸದಾಗಿ ತೆರೆಯಲಾದ ಎಟಿಎಂ ಘಟಕಗಳು -752
* ಅಂಚೆ ಕಚೇರಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ- 1,789
* ನಕ್ಸಲರ ದಾಳಿಗಳ ಇಳಿಕೆ ಪ್ರಮಾಣ 25%
* ಯುಪಿಎ ಸರ್ಕಾರದ ಅವಧಿಗೆ ಹೋಲಿಸಿದರೆ, ಎನ್‌ಡಿಎ ಅವಧಿಯಲ್ಲಿ ಪರಿಸ್ಥಿತಿ ಸುಧಾರಣೆ.
* ಈ ದಾಳಿಗಳಲ್ಲಿ ಸಾವುಗಳ ಇಳಿಕೆ ಪ್ರಮಾಣ -45%

ಬಂಡುಕೋರರ ನಿಯಂತ್ರಣ
‘ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೊಲ್ಯಾಂಡ್ (ಎನ್‌ಡಿಆರ್‌ಬಿ) ಬಂಡುಕೋರರ ಧಂಗೆ ಮತ್ತು  ಹಿಂಸಾಚಾರವನ್ನು ನಿಯಂತ್ರಣಕ್ಕೆ ತರಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸುವ ಮೂಲಕ ಇದನ್ನು ಸಾಧಿಸಲಾಗಿದೆ’.

*911- ಬಂಡುಕೋರರ ಬಂಧನ.
* ಭದ್ರತಾ ಪಡೆಗಳ ಕಾರ್ಯಾಚರಣೆಗಳಲ್ಲಿ ಮೃತಪಟ್ಟ ಬಂಡುಕೋರರು- 52

ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ
‘ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪಾಕಿಸ್ತಾನ ಪ್ರಾಯೋಜಿಸುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅದನ್ನು ಅಲ್ಲಿಂದ ಸಂಪೂರ್ಣ ನಿರ್ಮೂಲನೆ ಮಾಡಲಾಗುತ್ತದೆ. ಪ್ರತ್ಯೇಕತಾವಾದಿಗಳು ಕಾಶ್ಮೀರಿ ಯುವಕರನ್ನು ಹಾದಿತಪ್ಪಿಸದಂತೆ ತಡೆಯುತ್ತೇವೆ. ಅಲ್ಲಿನ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಯೋತ್ಪಾದನೆ ಮತ್ತು ಹಿಂಸಾಚಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT