ಹಾಶೀಮ್ ಆಮ್ಲಾ ಶತಕದ ಸೊಬಗು

7

ಹಾಶೀಮ್ ಆಮ್ಲಾ ಶತಕದ ಸೊಬಗು

Published:
Updated:
ಹಾಶೀಮ್ ಆಮ್ಲಾ ಶತಕದ ಸೊಬಗು

ಲಂಡನ್: ಹಾಶೀಮ್ ಆಮ್ಲಾ (103; 115ಎ, 5ಬೌಂ, 2ಸಿ) ಅವರ ಅಮೋಘ ಶತಕ ಹಾಗೂ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ (27ಕ್ಕೆ4) ಅವರ ಕೈಚಳಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 96 ರನ್‌ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿದೆ.

ಕೆನ್ನಿಂಗ್‌ಟನ್ ಓವಲ್ ಕ್ರೀಡಾಂಗ ಣದಲ್ಲಿ ಶನಿವಾರ ಮೊದಲು ಬ್ಯಾಟ್‌ ಮಾಡಿದ ಹರಿಣಗಳ ನಾಡಿನ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 299 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಸಿಂಹಳೀಯ ನಾಡಿನ ತಂಡ 41.3 ಓವರ್‌ಗಳಲ್ಲಿ 203 ರನ್‌ಗಳಿಗೆ ಹೋರಾಟ ಮುಗಿಸಿತು.

ಆಮ್ಲಾ ಮಿಂಚು: ಆಮ್ಲಾ ಇಲ್ಲಿ ಕ್ವಿಂಟನ್ ಡಿ ಕಾಕ್ (23) ಅವರೊಂದಿಗೆ ಮೊದಲ ವಿಕೆಟ್‌ಗೆ 44 ರನ್‌ ಗಳಿಸಿದರು. ಕ್ವಿಂಟನ್  ಔಟಾದ ನಂತರ   ಫಾಫ್ ಡು ಪ್ಲೆಸಿ ಜೊತೆಗೆ ಎರಡನೇ ವಿಕೆಟ್‌ಗೆ 145 ರನ್‌ ಸೇರಿಸಿದರು. ಆಮ್ಲಾ 112 ಎಸೆತಗಳಲ್ಲಿ ಶತಕ ಪೂರೈಸಿದರು. ಫಾಫ್ 70 ಎಸೆತಗಳಲ್ಲಿ 75 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರು

ದಕ್ಷಿಣ ಆಫ್ರಿಕಾ:
50 ಓವರ್‌ಗಳಲ್ಲಿ 6 ವಿಕೆಟ್‌ಗೆ 299 (ಹಾಶೀಮ್ ಆಮ್ಲಾ 103, ಕ್ವಿಂಟನ್ ಡಿ ಕಾಕ್ 23, ಫಾಫ್ ಡು ಪ್ಲೆಸಿ 75, ಡೇವಿಡ್ ಮಿಲ್ಲರ್ 18, ಜೆ.ಪಿ. ಡುಮಿನಿ ಔಟಾಗದೆ 38, ಕ್ರಿಸ್ ಮೊರಿಸ್ 20; ಸುರಂಗಾ ಲಕ್ಮಲ್ 51ಕ್ಕೆ1, ನುವಾನ್‌ ಪ್ರದೀಪ್ 54ಕ್ಕೆ2, ಸೀಕುಗೆ ಪ್ರಸನ್ನ 72ಕ್ಕೆ1).

ಶ್ರೀಲಂಕಾ: 41.3 ಓವರ್‌ಗಳಲ್ಲಿ 203 (ನಿರೋಷನ್‌ ಡಿಕ್ವೆಲ್ಲಾ 41, ಉಪುಲ್‌ ತರಂಗಾ 57, ಕುಶಾಲ್‌ ಪೆರೇರಾ ಔಟಾ ಗದೆ 44; ಕಗಿಸೊ ರಬಾಡ 46ಕ್ಕೆ1, ಕ್ರಿಸ್‌ ಮೊರಿಸ್‌ 32ಕ್ಕೆ2, ಇಮ್ರಾನ್‌ ತಾಹಿರ್‌ 27ಕ್ಕೆ4). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 96ರನ್‌ ಗೆಲುವು.

ಪಂದ್ಯ ಶ್ರೇಷ್ಠ:ಇಮ್ರಾನ್‌ ತಾಹಿರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry