ಐರ್ಲೆಂಡ್‌ ಪ್ರಧಾನಿಯಾಗಿ ವರಾಡಕರ್‌ ಆಯ್ಕೆ: ಮಹಾರಾಷ್ಟ್ರದಲ್ಲಿ ಸಂಭ್ರಮ

7

ಐರ್ಲೆಂಡ್‌ ಪ್ರಧಾನಿಯಾಗಿ ವರಾಡಕರ್‌ ಆಯ್ಕೆ: ಮಹಾರಾಷ್ಟ್ರದಲ್ಲಿ ಸಂಭ್ರಮ

Published:
Updated:
ಐರ್ಲೆಂಡ್‌ ಪ್ರಧಾನಿಯಾಗಿ ವರಾಡಕರ್‌ ಆಯ್ಕೆ: ಮಹಾರಾಷ್ಟ್ರದಲ್ಲಿ ಸಂಭ್ರಮ

ಮುಂಬೈ/ಸಿಂಧುದುರ್ಗ: ಐರ್ಲೆಂಡ್‌ ಪ್ರಧಾನಿಯಾಗಿ ಭಾರತ ಸಂಜಾತ ವೈದ್ಯ ಹಾಗೂ ಸಲಿಂಗಿ ಸಚಿವ ಲಿಯೊ ವರಾಡಕರ್‌ ಅವರ ಆಯ್ಕೆಯನ್ನು ಶುಕ್ರವಾರ ರಾತ್ರಿ ಪ್ರಕಟಿಸುತ್ತಿದ್ದಂತೆ ಮುಂಬೈ ಮತ್ತು ಸಿಂಧುದುರ್ಗ ಜಿಲ್ಲೆಯ ವಾರಡ್‌ ಗ್ರಾಮದಲ್ಲಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಸಂಭ್ರಮಿಸಿದರು.

ಲಿಯೊ ಪೂರ್ವಿಕರು ಮೂಲತಃ ವಾರಡ್‌ನವರು. ಈ ಗ್ರಾಮದಲ್ಲಿದ್ದ ಇವರ ಸಂಬಂಧಿಕರು ಮುಂಬೈಗೆ ಹೋಗಿ ನೆಲೆಸಿದ್ದಾರೆ.

ಕ್ರೀಡಾಭಿಮಾನಿಯಾಗಿದ್ದ ಲಿಯೊ, ಕೊಂಕಣಿ ಅಡುಗೆಯನ್ನು ಇಷ್ಟಪಡುತ್ತಿದ್ದರು. ಪಾಮಫ್ರಿಟ್‌ ಮೀನುಗಳೆಂದರೆ ನೆಚ್ಚಿನ ಆಹಾರ. 2011ರಲ್ಲಿ  ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ವೇಳೆ ಐರ್ಲೆಂಡ್‌ನ ಕ್ರಿಕೆಟ್‌ ತಂಡದೊಂದಿಗೆ ಮುಂಬೈಗೂ ಬಂದಿದ್ದರು ಎಂದು ಅವರ ಸ್ನೇಹಿತರು ನೆನಪಿಸಿಕೊಂಡರು.

ಮಹಾರಾಷ್ಟ್ರದ ಕರಾವಳಿ ಕೊಂಕಣ ಪ್ರಾಂತ್ಯದ ಮಾಲ್ವಾನ್‌ ತಾಲ್ಲೂಕಿನ ವಾರಡ್‌ ಗ್ರಾಮವು ಬೀಚ್‌, ವಿಶೇಷ  ಆಹಾರ ಶೈಲಿ, ವಿಭಿನ್ನ ಸಂಸ್ಕೃತಿ ಹಾಗೂ ಪ್ರವಾಸೋದ್ಯಮದಿಂದ  ಗಮನಸೆಳೆದಿದೆ.  ಲಿಯೊ ಇದುವರೆಗೆ ವಾರಡ್‌ಗೆ ಭೇಟಿ ನೀಡಿಲ್ಲ.  ಶುಕ್ರವಾರ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ, ಸ್ನೇಹಿತರು ಲಿಯೊ ಭಾವಚಿತ್ರದ ಮುಂದೆ ಕೇಕ್‌ ಕತ್ತರಿಸಿ ಸಂತಸ ಪಟ್ಟರು. ಮತ್ತೊಂದೆಡೆ ಬೊರಿವಿಲಿಯಲ್ಲಿ ನೆಲೆಸಿರುವ ಇವರ 60  ಸಂಬಂಧಿಕರು ಫಲಿತಾಂಶಕ್ಕಾಗಿ ಟಿವಿ ಎದುರು ಕುಳಿತಿದ್ದರು. ಲಿಯೊ ಗೆಲುವು ಖಾತ್ರಿಯಾಗುತ್ತಿದ್ದಂತೆಯೇ, ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂತಸಪಟ್ಟರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬದಲಾವಣೆ ತರಬಹುದು. ನಾನು ಪ್ರಧಾನಿ ಹುದ್ದೆಗೆ ಆಯ್ಕೆಯಾಗಿರುವುದೇ ಇದಕ್ಕೆ ಸಾಕ್ಷಿ

–ಲಿಯೊ ವರಾಡಕರ್‌,

ಐರ್ಲೆಂಡ್‌ ನಿಯೋಜಿತ ಪ್ರಧಾನಿ

ದಾಖಲೆಯ ಮತದಾನ

ಲಂಡನ್‌ (ಪಿಟಿಐ):ಚುನಾವಣೆಯಲ್ಲಿ ಲಿಯೊ ವರಾಡಕರ್‌, ಶೇಕಡಾ 60ರಷ್ಟು ಮತ ಪಡೆದರೆ, ಪ್ರತಿಸ್ಪರ್ಧಿ ಸಿಮೋನ್‌ ಕೊವೆನೆಯ್ಸ್‌ ಶೇಕಡಾ 40 ರಷ್ಟು ಮತ ಗಳಿಸಿದರು. ಈ ಮೂಲಕ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಶೇಕಡಾ 100ರಷ್ಟು ಮತ ಚಲಾವಣೆ ನಡೆದ ದಾಖಲೆ ಬರೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry