ಭಾರತೀಯ ಯೋಧರ ಬಲಿದಾನ ಸ್ಮರಿಸಿದ ಮ್ಯಾಕ್ರನ್‌

7

ಭಾರತೀಯ ಯೋಧರ ಬಲಿದಾನ ಸ್ಮರಿಸಿದ ಮ್ಯಾಕ್ರನ್‌

Published:
Updated:
ಭಾರತೀಯ ಯೋಧರ ಬಲಿದಾನ ಸ್ಮರಿಸಿದ ಮ್ಯಾಕ್ರನ್‌

ಪ್ಯಾರಿಸ್‌: ಪರಸ್ಪರ ಸಹಕಾರದೊಂದಿಗೆ ಭಯೋತ್ಪಾದನೆ ತಡೆಗಟ್ಟಲು ಭಾರತ ಮತ್ತು ಫ್ರಾನ್ಸ್‌ ಒಮ್ಮತದ ನಿರ್ಣಯ ಕೈಗೊಂಡಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್‌ ಅವರು ಭಯೋತ್ಪಾದನೆಯನ್ನು ಹತ್ತಿಕ್ಕುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.

ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಪ್ರಸ್ತುತ ಭಯೋತ್ಪಾದನೆಯು ವಿಶ್ವಕ್ಕೆ ಸವಾಲಾಗಿದೆ. ಉಗ್ರರ ಭೀತಿ ಎದುರಿಸುತ್ತಿರುವ ಫ್ರಾನ್ಸ್‌ ಕೂಡ ಇದನ್ನು ಅರ್ಥೈಸಿಕೊಂಡಿದೆ’ ಎಂದು ಹೇಳಿದರು.

‘ಭಯೋತ್ಪಾದನೆಯನ್ನು ಸಮರ್ಥವಾಗಿ ಮೆಟ್ಟಿನಿಲ್ಲಲು ಒಗ್ಗಟ್ಟಿನ ಅವಶ್ಯಕತೆ ಇದೆ’ ಎಂದು ಪ್ರತಿಪಾದಿಸಿದರು.

ಫ್ರಾನ್ಸ್‌ನೊಂದಿಗೆ ವ್ಯಾಪಾರ, ತಂತ್ರಜ್ಞಾನ, ಹೂಡಿಕೆ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯಕ್ಕೂ ಭಾರತ ಉತ್ಸುಕವಾಗಿದೆ ಎಂದು  ಮೋದಿ ತಿಳಿಸಿದರು.

‘ವಿಶ್ವ ಮಹಾಯುದ್ಧ ಮತ್ತು ಫ್ರಾನ್ಸ್‌ನ ಸ್ವಾತಂತ್ರ್ಯ ಹೋರಾಟಕ್ಕಾಗಿ ಹಲವು ಭಾರತೀಯ ಯೋಧರು ತಮ್ಮ ಪ್ರಾಣ ಅರ್ಪಿಸಿದ್ದಾರೆ. ಭಾರತದೊಂದಿಗೆ ಫ್ರಾನ್ಸ್‌ ಹೊಂದಿರುವ ಗಟ್ಟಿ ನಂಬಿಕೆಗೆ ಇದು ಸಾಕ್ಷಿ’ ಎಂದು ಅಧ್ಯಕ್ಷ ಮ್ಯಾಕ್ರನ್‌ ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry