ಫೈನಲ್‌ಗೆ ಪ್ರಣೀತ್

7

ಫೈನಲ್‌ಗೆ ಪ್ರಣೀತ್

Published:
Updated:
ಫೈನಲ್‌ಗೆ ಪ್ರಣೀತ್

ಬ್ಯಾಂಕಾಕ್: ಭಾರತದ ಬಿ. ಸಾಯಿ ಪ್ರಣೀತ್‌ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶನಿ ವಾರ ಫೈನಲ್‌ಗೆ ಲಗ್ಗೆಯಿಟ್ಟರೆ, ಸೈನಾ ನೆಹ್ವಾಲ್ ಸೋಲು ಅನುಭವಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಆಟಗಾರ 21–11, 21–15ರಿಂದ ಸ್ಥಳೀಯ ಆಟಗಾರ ಪೊನ್ನವಿತ್‌ ತೊಂಗ್‌ ನುವಮ್ ಅವರನ್ನು ಮಣಿಸಿದರು.

ಮೊದಲ ಗೇಮ್‌ನಲ್ಲೇ ಅತ್ಯುತ್ತಮ ಆರಂಭ ಪಡೆದ ಪ್ರಣೀತ್‌ ಎದುರಾಳಿಯಿಂದ ಹೆಚ್ಚು ಪೈಪೋಟಿ ಎದುರಿಸಲಿಲ್ಲ. ಪ್ರಬಲ ಸ್ಮ್ಯಾಷ್ ಮತ್ತು ರಿಟರ್ನ್ಸ್‌ಗಳಿಗೆ ತೊಂಗ್‌ನುವಮ್ ಬಳಿ ಉತ್ತರ ಇರಲಿಲ್ಲ.

ಥಾಯ್ಲೆಂಡ್‌ನ ಆಟಗಾರ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ಪ್ರಣೀತ್‌ ತಮ್ಮ ಕೌಶಲಗಳ ಮೂಲಕ ಎದುರಾಳಿಯ ಪ್ರಯತ್ನ ವಿಫಲಗೊಳಿಸಿದರು. ಪ್ರಶಸ್ತಿಗಾಗಿ ಭಾರತದ ಆಟಗಾರ ಇಂಡೊನೇಷ್ಯಾದ 19ನೇ ಶ್ರೇಯಾಂ ಕದ ಜೋನಾಥನ್ ಕ್ರಿಸ್ಟಿ ಎದುರು ಆಡಲಿದ್ದಾರೆ.

ಸೈನಾಗೆ ಸೋಲು: ಗಾಯದಿಂದ ಚೇತರಿಸಿ ಕೊಂಡ ಬಳಿಕ ಫಾರ್ಮ್ ಕಂಡು ಕೊಳ್ಳುವ ಯತ್ನದಲ್ಲಿರುವ ಸೈನಾ ನೆಹ್ವಾಲ್‌ 19–21, 18–21ರಿಂದ ಥಾಯ್ಲೆಂಡ್‌ನ ಬೂಸನ್‌ ಸನ್ ಒಂಗ್‌ಬ ಮುರ್ಗಪನ್ ವಿರುದ್ಧ ಸೋಲು ಅನುಭವಿಸಿದರು.

ಉತ್ತಮ ಆರಂಭ ಕಂಡ ಸೈನಾ ಎರಡೂ ಗೇಮ್‌ಗಳಲ್ಲಿ ಪ್ರಬಲ ಪೈಪೋಟಿ ನೀಡಿದರು. ಅಂತಿಮ ಹಂತದವರೆಗೂ ಸುಲಭದಲ್ಲಿ ಸೋಲು ಒಪ್ಪಿಕೊಳ್ಳಲಿಲ್ಲ. ಆದರೆ ಬೂಸನ್‌ಸನ್‌ ಅಮೋಘ ಶಾಟ್‌ಗಳ ಮೂಲಕ ಎದು ರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry