ಬೆಳಗಾವಿ, ಧಾರವಾಡದಲ್ಲಿ ಭೂಕಂಪದ ಅನುಭವ

7

ಬೆಳಗಾವಿ, ಧಾರವಾಡದಲ್ಲಿ ಭೂಕಂಪದ ಅನುಭವ

Published:
Updated:
ಬೆಳಗಾವಿ, ಧಾರವಾಡದಲ್ಲಿ ಭೂಕಂಪದ ಅನುಭವ

ಬೆಳಗಾವಿ / ಧಾರವಾಡ: ಬೆಳಗಾವಿ ಮತ್ತು ಧಾರವಾಡದಲ್ಲಿ ಶನಿವಾರ ರಾತ್ರಿ ಭೂಕಂಪದ ಅನುಭವವಾಗಿದೆ. ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ ಮತ್ತು ವಿನಾಯಕ ನಗರದಲ್ಲಿ ರಾತ್ರಿ 11.44ರ ವೇಳೆಗೆ 3– 4 ಸೆಕೆಂಡ್‌ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಧಾರವಾಡದಲ್ಲಿ ಸುಮಾರು 5 ಸೆಕೆಂಡ್ ಭೂಮಿ ಕಂಪಿಸಿದ ಅನುಭವವಾಗಿದೆ. ನಗರದ ನಾರಾಯಣಪುರ ಮತ್ತು ಕುಮಾರೇಶ್ವರನಗರದ ಮನೆಗಳಲ್ಲಿ ಕುರ್ಚಿ, ಮೇಜು ಅಲುಗಾಡಿದ ಅನುಭವವಾಗಿದೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ.

ಶನಿವಾರ ರಾತ್ರಿ ಮಹಾರಾಷ್ಟ್ರದ ಕೊಯ್ನಾದಲ್ಲಿ 4.8ರಷ್ಟು ತೀವ್ರತೆಯ ಭೂಕಂಪವಾಗಿದೆ. ಇದರಿಂದಾಗಿ ಬೆಳಗಾವಿ, ಧಾರವಾಡ ಭಾಗದಲ್ಲೂ ಭೂಮಿ ಕಂಪಿಸಿರಬಹುದು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry