ಲಂಡನ್‌ನಲ್ಲಿ ಉಗ್ರರ ಕೃತ್ಯಕ್ಕೆ 7 ಮಂದಿ ಬಲಿ

7

ಲಂಡನ್‌ನಲ್ಲಿ ಉಗ್ರರ ಕೃತ್ಯಕ್ಕೆ 7 ಮಂದಿ ಬಲಿ

Published:
Updated:
ಲಂಡನ್‌ನಲ್ಲಿ ಉಗ್ರರ ಕೃತ್ಯಕ್ಕೆ 7 ಮಂದಿ ಬಲಿ

ಲಂಡನ್‌: ಲಂಡನ್‌ ನಗರದಲ್ಲಿ ಉಗ್ರರು ನಡೆಸಿರುವ ಅಟ್ಟಹಾಸಕ್ಕೆ 7 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೂರು ಕಡೆಗಳಲ್ಲಿ ಶನಿವಾರ ರಾತ್ರಿ ಉಗ್ರರು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಮೂವರೂ ಉಗ್ರರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.ಉಗ್ರರು ಲಂಡನ್‌ ಬ್ರಿಜ್‌ನಲ್ಲಿ ಪಾದಾಚಾರಿಗಳ ಮೇಲೆ ವ್ಯಾನ್‌ ನುಗ್ಗಿಸಿದ್ದಾರೆ. ಬರೊ ಮಾರ್ಕೆಟ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಇರಿದಿದ್ದಾರೆ.

ಬಹುತೇಕ ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಇದೆ. ಲಂಡನ್‌ ನಗರದಾದ್ಯಂತ ಹೈಅಲರ್ಟ್‌ ಘೋಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry