ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು; ಹುತಾತ್ಮ ಯೋಧ ಪ್ರೇಮ್ ಸಾಗರ್ ಕುಟುಂಬ ಮನವಿ

7

ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು; ಹುತಾತ್ಮ ಯೋಧ ಪ್ರೇಮ್ ಸಾಗರ್ ಕುಟುಂಬ ಮನವಿ

Published:
Updated:
ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು; ಹುತಾತ್ಮ ಯೋಧ ಪ್ರೇಮ್ ಸಾಗರ್ ಕುಟುಂಬ ಮನವಿ

ಡಿಯೊರಿಯಾ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದು ಬೇಡ ಎಂದು ಒತ್ತಾಯಿಸಿ ಹುತಾತ್ಮ ಯೋಧ  ಪ್ರೇಮ್ ಸಾಗರ್ ಅವರ ಕುಟುಂಬ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದೆ.

ತಿಂಗಳ ಹಿಂದೆ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಸೈನಿಕರ ಪೈಶಾಚಿಕ ಕೃತ್ಯಕ್ಕೊಳಗಾಗಿ ಯೋಧ ಪ್ರೇಮ್ ಸಾಗರ್ ಹುತಾತ್ಮರಾಗಿದ್ದರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ -ಪಾಕಿಸ್ತಾನದ ನಡುವಿನ ಪಂದ್ಯವನ್ನು ನಾವು ವಿರೋಧಿಸುತ್ತೇವೆ.  ಹುತಾತ್ಮ ಯೋಧರ ಕುಟುಂಬಗಳ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಆಡಬಾರದು ಮತ್ತು ಆ ದೇಶದೊಂದಿಗೆ ಯಾವುದೇ ಸಂಬಂಧ ಇರಿಸಿಕೊಳ್ಳಬಾರದು. ಭಾರತ ಪಾಕಿಸ್ತಾನದೊಂದಿಗೆ ಆಡಬಾರದು ಎಂದು ಬಿಸಿಸಿಐ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಮನವಿ ಮಾಡುತ್ತಿದ್ದೇವೆ ಹುತಾತ್ಮ ಯೋಧನ ಪುತ್ರ ಈಶ್ವರ್ ಚಂದ್ರ ಮಾಧ್ಯಮದವರಲ್ಲಿ ಹೇಳಿದ್ದಾರೆ.

ಪಾಕ್‍ನೊಂದಿಗೆ ಆಟ ಯಾಕೆ?

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್- ಭಾರತ ಹಣಾಹಣಿ ಆರಂಭವಾಗಲು ಕ್ಷಣಗಣನೆ ನಡೆಯುತ್ತಿದ್ದು, ಟ್ವಿಟರ್‍‍ನಲ್ಲಿ ಪಾಕಿಸ್ತಾನದೊಂದಿಗೆ ಆಟ ಯಾಕೆ ಎಂದು ಪ್ರಶ್ನಿಸಿ  #WhyPlayPak ಎಂಬ ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗುತ್ತಿದ್ದೆ.

ಉಗ್ರರೊಂದಿಗೆ ಕ್ರಿಕೆಟ್ ಆಡುವುದು ಯಾಕೆ ಎಂದು ಕುಲಭೂಷಣ್ ಯಾದವ್ ಅವರ  ಗೆಳೆಯ ಪ್ರಶ್ನಿಸಿರುವುದಾಗಿ ಟೈಮ್ಸ್ ನೌ ಮಾಧ್ಯಮ ಟ್ವೀಟ್ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry