ಪಾಕಿಸ್ತಾನವನ್ನು ಸೋಲಿಸುವುದು ಗಂಗೆಯಲ್ಲಿ ಪಾಪ ತೊಳೆಯುವುದಕ್ಕೆ ಸಮ

7

ಪಾಕಿಸ್ತಾನವನ್ನು ಸೋಲಿಸುವುದು ಗಂಗೆಯಲ್ಲಿ ಪಾಪ ತೊಳೆಯುವುದಕ್ಕೆ ಸಮ

Published:
Updated:
ಪಾಕಿಸ್ತಾನವನ್ನು ಸೋಲಿಸುವುದು ಗಂಗೆಯಲ್ಲಿ ಪಾಪ ತೊಳೆಯುವುದಕ್ಕೆ ಸಮ

ಅಮೃತ್‍ಸರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಸೋಲಿಸುವುದು ಪವಿತ್ರ ಗಂಗೆಯಲ್ಲಿ ಪಾಪ ತೊಳೆಯುವುದಕ್ಕೆ ಸಮ ಎಂದು ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ- ಭಾರತ ಕ್ರಿಕೆಟ್ ಪಂದ್ಯ ಆರಂಭವಾಗಿದ್ದು, ಭಾರತೀಯ ಕ್ರಿಕೆಟ್ ತಂಡಕ್ಕೆ ಸಿಧು ಶುಭ ಕೋರಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತ ಗೆದ್ದರೆ ಅದೊಂದು ದೊಡ್ಡ ಸಾಧನೆ. ದೇಶದ ಘನತೆಯ ವಿಚಾರ ಬಂದಾಗ, ಪಾಕಿಸ್ತಾನವನ್ನು ಸೋಲಿಸುವುದು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಪಾಪ ತೊಳೆಯುವುದಕ್ಕೆ ಸಮ ಎಂದಿದ್ದಾರೆ ಸಿಧು.

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ತಂಡ ಫೀಲ್ಡಿಂಗ್‌ ಆಯ್ದುಕೊಂಡಿದೆ.

[related]

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry