‘ಬಿಲ್ಲಾ’ ಹಿಂದಿಯಲ್ಲಿ ಬಿಡುಗಡೆ

7

‘ಬಿಲ್ಲಾ’ ಹಿಂದಿಯಲ್ಲಿ ಬಿಡುಗಡೆ

Published:
Updated:
‘ಬಿಲ್ಲಾ’ ಹಿಂದಿಯಲ್ಲಿ ಬಿಡುಗಡೆ

‘ಬಾಹುಬಲಿ’ ಚಿತ್ರದಿಂದಾಗಿ ಪ್ರಭಾಸ್‌ ಅವರ ಕೀರ್ತಿ ದೇಶದ ಗಡಿ ದಾಟಿ ಹರಡಿದೆ. ಪ್ರಭಾಸ್ ಅವರ ಜನಪ್ರಿಯತೆಯನ್ನು ಲಾಭವನ್ನಾಗಿ ಪರಿವರ್ತಿಸಲು ಕೆಲ ನಿರ್ಮಾಪಕರು ಸಿದ್ಧರಾಗಿದ್ದಾರೆ.

ಪ್ರಭಾಸ್‌–ಅನುಷ್ಕಾ ಶೆಟ್ಟಿ ಅಭಿನಯದ ‘ಬಿಲ್ಲಾ’ 2009ರಲ್ಲಿ ತೆರೆಕಂಡಿತ್ತು. ಇದೇ ತೆಲುಗು ಸಿನಿಮಾವನ್ನು ಇದೀಗ ಹಿಂದಿಗೆ ಡಬ್‌ ಮಾಡಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಸಿನಿಮಾದ ಹಿಂದಿ ಆವೃತ್ತಿಯ ಟ್ರೇಲರ್‌ ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

‘ಬಿಲ್ಲಾ’ ಸಿನಿಮಾದಲ್ಲಿ  ಪ್ರಭಾಸ್‌ ಅವರು ಬಿಲ್ಲಾ ಹಾಗೂ ರಂಗ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇದು 2007ರಲ್ಲಿ ಬಿಡುಗಡೆಯಾದ ತಮಿಳು ಚಿತ್ರದ ರಿಮೇಕ್‌. ತಮಿಳಿನಲ್ಲಿ ಅಜಿತ್‌ ನಾಯಕನಾಗಿ ನಟಿಸಿದ್ದರು. ಪ್ರಭಾಸ್‌ ಸದ್ಯ ಅಮೆರಿಕದಲ್ಲಿದ್ದು, ಭಾರತಕ್ಕೆ ಶೀಘ್ರವೇ ಹಿಂದಿರುಗಲಿದ್ದಾರೆ.

ಅವರ ಅಭಿನಯದ ‘ಸಾಹೊ’ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದ್ದು, ಈ ಚಿತ್ರ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry