ವರ್ಧಮಾನಸಾಗರ, ತ್ಯಾಗಿಗಳ ಪುರಪ್ರವೇಶ

7

ವರ್ಧಮಾನಸಾಗರ, ತ್ಯಾಗಿಗಳ ಪುರಪ್ರವೇಶ

Published:
Updated:
ವರ್ಧಮಾನಸಾಗರ, ತ್ಯಾಗಿಗಳ ಪುರಪ್ರವೇಶ

ಶ್ರವಣಬೆಳಗೊಳ: ಮುಂದಿನ ವರ್ಷ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವದ ನೇತೃತ್ವ ವಹಿಸುವ ಆಚಾರ್ಯ 108 ವರ್ಧಮಾನಸಾಗರ ಮಹಾರಾಜರು ಹಾಗೂ 44 ಸಂಘಸ್ಥ ತ್ಯಾಗಿಗಳು ಭಾನುವಾರ ಪುರಪ್ರವೇಶ ಮಾಡಿದರು.

ಮಧ್ಯಪ್ರದೇಶದ ಇಂದೋರ್‌ ಸಮೀಪದ ಸಿದ್ಧವರಕೂಟದಿಂದ ಸುಮಾರು 1500 ಕಿ.ಮೀ. ಪಾದಯಾತ್ರೆ ಮೂಲಕ ಬಂದ ತ್ಯಾಗಿಗಳಿಗೆ ಶ್ರವಣಬೆಳಗೊಳದ ರೈಲು ನಿಲ್ದಾಣದ ಗೇಟ್‌ ಬಳಿ ನಿರ್ಮಿಸಿದ್ದ ಪ್ರವೇಶದ್ವಾರದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಕ್ಷೇತ್ರದ ಚಾರುಕೀರ್ತಿ ಭಟ್ಟಾಕರ ಸ್ವಾಮೀಜಿ, ಸಚಿವ ಎ. ಮಂಜು, ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್‌, ಕಾರ್ಯಾಧ್ಯಕ್ಷ ಎಸ್‌.ಜಿತೇಂದ್ರಕುಮಾರ್‌ ಹಾಗೂ ಅಪಾರ ಸಂಖ್ಯೆ ಭಕ್ತರು ಪುಷ್ಪವೃಷ್ಟಿಯೊಂದಿಗೆ ಪಾದಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಭಕ್ತರಿಂದ ಜಯಘೋಷ ಮೊಳಗಿತು.

ಹಡೇನಹಳ್ಳಿಯಲ್ಲಿ ತಂಗಿದ್ದ ಮುನಿವರ್ಯರಿಗೆ ಶನಿವಾರ ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಶ್ರೀಫಲ ನೀಡಿ ಸತ್ಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry