ರಿಯಲ್ ಮ್ಯಾಡ್ರಿಡ್‌ ತಂಡಕ್ಕೆ ಪ್ರಶಸ್ತಿ ಸಂಭ್ರಮ

7
ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌; ರೊನಾಲ್ಡೊ ಮಿಂಚಿನ ಆಟ

ರಿಯಲ್ ಮ್ಯಾಡ್ರಿಡ್‌ ತಂಡಕ್ಕೆ ಪ್ರಶಸ್ತಿ ಸಂಭ್ರಮ

Published:
Updated:
ರಿಯಲ್ ಮ್ಯಾಡ್ರಿಡ್‌ ತಂಡಕ್ಕೆ ಪ್ರಶಸ್ತಿ ಸಂಭ್ರಮ

ಕಾರ್ಡಿಫ್‌, ಇಂಗ್ಲೆಂಡ್‌: ಫುಟ್‌ಬಾಲ್‌ ಪ್ರಿಯರ ಕಣ್ಮಣಿ  ಕ್ರಿಸ್ಟಿಯಾನೊ ರೊನಾಲ್ಡೊ ಅವರು ಶನಿವಾರ ಕಾರ್ಡಿಫ್‌ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದರು. ಅವರು ತಂದಿದ್ದ ಎರಡು ಗೋಲುಗಳ ನೆರವಿನಿಂದ ರಿಯಲ್‌ ಮ್ಯಾಡ್ರಿಡ್‌ ತಂಡ ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಎರಡು ಪ್ರಶಸ್ತಿ ಗೆದ್ದು ದಾಖಲೆ ಬರೆಯಿತು.

ಚಾಂಪಿಯನ್ಸ್‌ ಲೀಗ್‌ನಲ್ಲಿ ತಂಡ ವೊಂದು ಸತತ ಎರಡು ಬಾರಿ ಟ್ರೋಫಿ ಎತ್ತಿ ಹಿಡಿದಿದ್ದು ಚರಿತ್ರೆಯಲ್ಲೇ ಮೊದಲು. ಶನಿವಾರ ನಡೆದ ಫೈನಲ್‌ ಹೋರಾಟದಲ್ಲಿ ಹಾಲಿ ಚಾಂಪಿಯನ್ ರಿಯಲ್‌ ಮ್ಯಾಡ್ರಿಡ್‌ 4–1 ಗೋಲುಗಳಿಂದ ಜುವೆಂಟಸ್‌ ತಂಡವನ್ನು ಪರಾಭವಗೊಳಿಸಿತು.

ಈ ಮೂಲಕ ಟೂರ್ನಿಯಲ್ಲಿ ಒಟ್ಟಾರೆ 12 ಟ್ರೋಫಿ ಎತ್ತಿಹಿಡಿದ ಸಾಧನೆಯನ್ನೂ ರೊನಾಲ್ಡೊ ಪಡೆ ಮಾಡಿತು. ಆರಂಭದಿಂದಲೇ ಆಕ್ರಮಣ ಕಾರಿ ಆಟಕ್ಕೆ ಅಣಿಯಾಗಿದ್ದ ಮ್ಯಾಡ್ರಿಡ್‌ ತಂಡಕ್ಕೆ ಮೊದಲ ನಿಮಿಷದಲ್ಲೇ ಖಾತೆ ತೆರೆಯುವ ಅವಕಾಶ ಲಭ್ಯವಾಗಿತ್ತು. ಲುಕಾ ಮೊಡ್ರಿಕ್‌ ಅವರ ಫ್ರೀ ಕಿಕ್‌ ಅನ್ನು ಜುವೆಂಟಸ್‌ ತಂಡದ ರಕ್ಷಣಾ ವಿಭಾಗದ ಆಟಗಾರರು ತಡೆದರು.19ನೇ ನಿಮಿ ಷದವರೆಗೂ  ಸಮಬಲದ ಪೈಪೋಟಿ ಮುಂದುವರಿದಿತ್ತು.

20ನೇ ನಿಮಿಷದಲ್ಲಿ ಡೇನಿಯಲ್‌ ಕಾರ್ವಜಲ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ತಡೆದ  ರೊನಾಲ್ಡೊ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಗುರಿ ಮುಟ್ಟಿಸಿ ಮೈದಾನದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು.

ಈ ಸಂತಸ ಎದುರಾಳಿ ಪಾಳಯ ದಲ್ಲಿ ಹೆಚ್ಚು ಕಾಲ ಉಳಿಯಲು ಜುವೆಂ ಟಸ್‌ ತಂಡದ ಮರಿಯೊ ಮಂಡಜುಕಿಕ್‌ ಅವಕಾಶ ನೀಡಲಿಲ್ಲ. 27ನೇ ನಿಮಿಷ ದಲ್ಲಿ ಅವರು ಗೋಲು ದಾಖಲಿಸಿ ಮಿಂಚಿದರು.

ಹೀಗಾಗಿ ಎರಡೂ ತಂಡಗಳು 1–1ರ ಸಮಬಲ ದೊಂದಿಗೆ ವಿರಾಮಕ್ಕೆ ಹೋದವು. ದ್ವಿತೀಯಾರ್ಧ ದಲ್ಲಿ ಹಾಲಿ ಚಾಂಪಿಯನ್‌ ಮ್ಯಾಡ್ರಿಡ್‌ ತಂಡ ಪಾರಮ್ಯ ಮೆರೆಯಿತು. 61ನೇ ನಿಮಿಷ ದಲ್ಲಿ ಕ್ಯಾಸೆಮಿರೊ ತಂಡಕ್ಕೆ 2–1ರ ಮುನ್ನಡೆ ತಂದುಕೊಟ್ಟರು. ಇದರ ಬೆನ್ನಲ್ಲೇ ರೊನಾಲ್ಡೊ ಗೋಲು ದಾಖಲಿಸಿ ತಂಡದ ಸಂಭ್ರಮ ಹೆಚ್ಚಿಸಿದರು.

64ನೇ ನಿಮಿಷದಲ್ಲಿ ಲುಕಾ ಮೊಡ್ರಿಕ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು  ಜುವೆಂಟಸ್‌ ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು. ಈ ಮೂಲಕ ಕ್ರಿಸ್ಟಿಯಾನೊ ವೃತ್ತಿಬದುಕಿ ನಲ್ಲಿ 600 ಗೋಲು ದಾಖಲಿಸಿದ ಸಾಧನೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry