ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ಧರಿಸಿದ್ದಕ್ಕೆ ಬಾಲಕಿಯರನ್ನು ಹೊರ ಹಾಕಿದ ಶಾಲೆ

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅನುಮತಿ ಇಲ್ಲದೆ ಹಿಜಾಬ್ ಧರಿಸಿದ್ದ ಇಬ್ಬರು ಮುಸ್ಲಿಂ ಬಾಲಕಿಯರನ್ನು ಶಾಲೆಯಿಂದ ಹೊರಗೆ ಕಳುಹಿಸಲಾಗಿದೆ.
ವರ್ಜಿನಿಯಾದ ಫ್ರೀಡಂ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.

ಧಾರ್ಮಿಕ ಕಾರಣಗಳಿಂದಾಗಿ ಹಿಜಾಬ್‌ ಧರಿಸಿರುವುದಕ್ಕೆ ಆಧಾರವಾಗಿ ಪೋಷಕರಿಂದ ಯಾವುದೇ ರೀತಿಯ ಸೂಚನಾ ಪತ್ರವನ್ನು ವಿದ್ಯಾರ್ಥಿನಿಯರು ತಂದಿರಲಿಲ್ಲ ಎಂದು ಶಾಲೆಯ ಮೂಲಗಳು ತಿಳಿಸಿವೆ.

ರಮ್ಜಾನ್‌ ಸಮಯವಾದ್ದರಿಂದ ನಾನು ಹಿಜಾಬ್ ಧರಿಸಬೇಕಾಯಿತು. ಅದು ನನ್ನ ಧರ್ಮ. ನಾನು ಏಕೆ ಟಿಪ್ಪಣಿ ಬರೆದು ಕೊಡಲಿ’ ಎಂದು ವಿದ್ಯಾರ್ಥಿನಿ ಬಹಾ ತಿಳಿಸಿದ್ದಾರೆ. ಶಾಲೆಯ ಅಧಿಕಾರಿಗಳು ಈಗಾಗಲೇ ವಿದ್ಯಾರ್ಥಿನಿಯರ ಕ್ಷಮೆಯಾಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT