ಇನ್ನೊಂದು ಅವಧಿಗೆ ಕುಂಬ್ಳೆ ಕೋಚ್‌ ಆಗಲಿ: ಎಂಜಿನಿಯರ್

7

ಇನ್ನೊಂದು ಅವಧಿಗೆ ಕುಂಬ್ಳೆ ಕೋಚ್‌ ಆಗಲಿ: ಎಂಜಿನಿಯರ್

Published:
Updated:
ಇನ್ನೊಂದು ಅವಧಿಗೆ ಕುಂಬ್ಳೆ ಕೋಚ್‌ ಆಗಲಿ: ಎಂಜಿನಿಯರ್

ಬರ್ಮಿಂಗ್‌ಹ್ಯಾಮ್‌: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅನಿಲ್‌ ಕುಂಬ್ಳೆ ಅವರನ್ನು ಭಾರತ ತಂಡದ ಮುಖ್ಯ ಕೋಚ್‌ ಆಗಿ ಮತ್ತೊಂದು ಅವಧಿಗೆ ಮುಂದುವರಿಸ ಬೇಕೆಂದು’ ಮಾಜಿ ಕ್ರಿಕೆಟಿಗ ಫಾರೂಕ್‌ ಎಂಜಿನಿಯರ್‌ ಅಭಿಪ್ರಾಯ ಪಟ್ಟಿದ್ದಾರೆ.

‘ಕುಂಬ್ಳೆ ಅವರು ಕೋಚ್‌ ಹುದ್ದೆಗೆ ಏರಿದ ಬಳಿಕ ಭಾರತ ತಂಡ ಹಲವು ಸರಣಿಗಳಲ್ಲಿ ಪ್ರಶಸ್ತಿ ಗೆದ್ದಿದೆ. ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ಮತ್ತೊಂದು ಅವಕಾಶ ನೀಡಬೇಕು’ ಎಂದಿದ್ದಾರೆ.

‘ಚಾಂಪಿಯನ್ಸ್‌ ಟ್ರೋಫಿಗೂ ಮುನ್ನವೇ ಹೊಸ ಕೋಚ್‌ ನೇಮಕಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು ಏಕೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಕೋಚ್‌ ಹುದ್ದೆಗೆ ವೀರೇಂದ್ರ ಸೆಹ್ವಾಗ್ ಮತ್ತು ಟಾಮ್‌ ಮೂಡಿ ಅವರ ಹೆಸರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತನಾಡಿದ್ದೇನೆ. ಅವರಿಗೆ ಬಿಸಿಸಿಐ ಆಹ್ವಾನ ನೀಡಬೇಕೆ ಹೊರತು ಅವರಾಗಿಯೇ ಅರ್ಜಿ ಸಲ್ಲಿಸುವುದು ಶೋಭೆಯಲ್ಲ’ ಎಂದು ಹೇಳಿದ್ದಾರೆ.

‘ವಿರಾಟ್‌ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಜೊತೆಗೆ ಯಶಸ್ವಿ ನಾಯಕ ಕೂಡ’ ಎಂದು ಶ್ಲಾಘಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry