ಅಂಪೈರ್ ರವಿ ಸುಬ್ರಹ್ಮಣ್ಯಂ ನಿಧನ

7

ಅಂಪೈರ್ ರವಿ ಸುಬ್ರಹ್ಮಣ್ಯಂ ನಿಧನ

Published:
Updated:
ಅಂಪೈರ್ ರವಿ ಸುಬ್ರಹ್ಮಣ್ಯಂ ನಿಧನ

ಬೆಂಗಳೂರು: ಹಿರಿಯ ಕ್ರಿಕೆಟ್ ಅಂಪೈರ್‌ ರವಿ ಸುಬ್ರಹ್ಮಣ್ಯಂ (51) ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನದಿಂದ ಭಾನುವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.

ರವಿ ಅವರ ತಂದೆ ಎಂ.ಜಿ. ಸುಬ್ರಹ್ಮಣ್ಯಂ ಟೆಸ್ಟ್‌ ಕ್ರಿಕೆಟ್ ಅಂಪೈರ್‌ ಆಗಿದ್ದರು. 1991ರಲ್ಲಿ ಬಿಸಿಸಿಐನ ಅಂಪೈರ್‌ ಪರೀಕ್ಷೆ ಪಾಸಾದ ಅವರು ಬಿಸಿಸಿಐ ಅಂಪೈರ್‌ಗಳ ಸಮಿತಿಯ ಸದಸ್ಯರೂ ಆಗಿದ್ದರು.

ಕರ್ನಾಟಕ ಕ್ರಿಕೆಟ್ ಅಂಪೈರ್‌ಗಳ ಸಂಘದ ಅಧ್ಯಕ್ಷರಾಗಿದ್ದರು. ರಣಜಿ ಟ್ರೋಫಿ, ಇರಾನಿ ಕಪ್‌, ದುಲೀಪ್ ಟ್ರೋಫಿ ಮತ್ತು ದೇವಧರ್‌ ಟ್ರೋಫಿ ಸೇರಿದಂತೆ 90ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry