ಪಾಕಿಸ್ತಾನ ವಿರುದ್ಧ ಭಾರತ ಜಯಭೇರಿ

7

ಪಾಕಿಸ್ತಾನ ವಿರುದ್ಧ ಭಾರತ ಜಯಭೇರಿ

Published:
Updated:
ಪಾಕಿಸ್ತಾನ ವಿರುದ್ಧ ಭಾರತ ಜಯಭೇರಿ

ಲಂಡನ್‌: ಬ್ಯಾಟ್ಸ್‌ಮನ್‌ಗಳು ಸ್ಫೋಟಿಸಿ ಬೃಹತ್‌ ಮೊತ್ತ ಕಲೆ ಹಾಕಿದರು. ನಂತರ ಬೌಲರ್‌ಗಳು ಮಿಂಚು ಹರಿಸಿದರು. ಇದರ ಪರಿಣಾಮ ಭಾರತ, ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.

ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಹಾಲಿ ಚಾಂಪಿಯನ್ನರು 124 ರನ್‌ಗಳಿಂದ (ಡಕ್‌ವರ್ಥ್‌ ಲೂಯಿಸ್ ನಿಯಮದಡಿ) ಮಣಿಸಿದರು.

ಮಳೆಯ ಕಾರಣ 48 ಓವರ್‌ಗಳಿಗೆ ಸೀಮಿತಗೊಳಿಸಿದ ಪಂದ್ಯದಲ್ಲಿ ಭಾರತ 3 ವಿಕೆಟ್‌ಗಳಿಗೆ 319 ರನ್‌ ಗಳಿಸಿತ್ತು.  ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಾಕಿಸ್ತಾನದ ಗುರಿ 324 ಆಯಿತು.

ಇದನ್ನು ಬೆನ್ನತ್ತಿದ ಸರ್ಫರಾಜ್ ಅಹಮ್ಮದ್ ಬಳಗ 4.5 ಓವರ್‌ಗಳಲ್ಲಿ 22 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. ಮತ್ತೆ ಪಂದ್ಯ ಆರಂಭಗೊಂಡಾಗ 41 ಓವರ್‌ಗಳಲ್ಲಿ 289 ರನ್‌ಗಳ ಗುರಿ ನಿಗದಿ ಮಾಡಲಾಯಿತು. ತಂಡ 33.4 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry