ಶಾಶ್ವತ ನೀರು ಯೋಜನೆಗೆ ಆಗ್ರಹ

7

ಶಾಶ್ವತ ನೀರು ಯೋಜನೆಗೆ ಆಗ್ರಹ

Published:
Updated:
ಶಾಶ್ವತ ನೀರು ಯೋಜನೆಗೆ ಆಗ್ರಹ

ಚಾಮರಾಜನಗರ: ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಮತ್ತು ಅಣೆಕಟ್ಟು ನಿರ್ಮಿಸುವ ತಮಿಳು ನಾಡು ಸರ್ಕಾರದ ಯೋಜನೆ ವಿರೋಧಿಸಿ ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್‌ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ವಾಟಾಳ್‌ ನಾಗರಾಜ್ ಅವರ ನೇತೃತ್ವ ದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು, ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು.

ತಾಳವಾಡಿಯ ಚಿಕ್ಕಹಳ್ಳಿಯಲ್ಲಿ ಅಣೆ ಕಟ್ಟು ನಿರ್ಮಿಸುವ ಮೂಲಕ ಚಿಕ್ಕಹೊಳೆ- ಮತ್ತು ಸುವರ್ಣಾವತಿ ಜಲಾಶಯಗಳಿಗೆ ಬರುವ ನೀರಿಗೆ ತಡೆಯೊಡ್ಡಲು ನಿರ್ಧರಿಸಿ ರುವ ತಮಿಳುನಾಡಿನ ಧೋರಣೆಯನ್ನು ವಾಟಾಳ್‌ ಖಂಡಿಸಿದರು.

‘ಈ ಅಣೆಕಟ್ಟಿನಿಂದ ಹರದನಹಳ್ಳಿ, ಚಂದಕವಾಡಿ ಹೋಬಳಿ ಸೇರಿದಂತೆ ಸುಮಾರು 2 ಲಕ್ಷ ಜನರಿಗೆ ಕುಡಿಯುವ ನೀರು ಹಾಗೂ ಕೃಷಿಗೆ ತೊಂದರೆಯಾಗು ತ್ತದೆ. ತಮಿಳುನಾಡು ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ತಕ್ಷಣವೇ ಈ ಯೋಜನೆಯನ್ನು ನಿಲ್ಲಿಸಬೇಕು. ಇಲ್ಲ ದಿದ್ದರೆ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಮುಖ್ಯಮಂತ್ರಿಯ ಜತೆ ಮಾತನಾಡಬೇಕು’ ಎಂದು ವಾಟಾಳ್ ಆಗ್ರಹಿಸಿದರು.

ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ತರುವಂತೆ ಎರಡು ವರ್ಷದಿಂದ ಉತ್ತರ ಕರ್ನಾಟಕ ಭಾಗದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಬ್ಬರು ರೈತರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿ . ರಾಜ್ಯ ಬಿಜೆಪಿ ಸಂಸದರು ಮನಸ್ಸು ಮಾಡಿದ್ದರೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಎಂದೋ ಬಗೆಹರಿಸ ಬಹುದಾಗಿತ್ತು. ಆದರೆ ಅವರಲ್ಲಿ ಇಚ್ಛಾ ಶಕ್ತಿಯೇ ಇಲ್ಲ’ ಎಂದು ಟೀಕಿಸಿದರು.

‘ಈ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಧಾನಿ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ಜೂನ್‌ 12ರಂದು ರಾಜ್ಯ ಬಂದ್‌ಗೆ ಕರೆ ನೀಡಿ ದ್ದೇವೆ. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಬೆಂಗಳೂರಿನಿಂದ ರಾಮ ನಗರ ಮಾರ್ಗವಾಗಿ ಮೇಕೆದಾಟಿನವರೆಗೆ ಜೂನ್‌ 6ರಂದು ಬೃಹತ್ ರ್‍ಯಾಲಿ ಹಮ್ಮಿ ಕೊಳ್ಳಲಾಗಿದೆ’ ಎಂದು ಹೇಳಿದರು.

ನಾಗರಾಜಮೂರ್ತಿ, ಶಿವನಂಜಪ್ಪ, ಕಾರ್ ನಾಗೇಶ್, ಹುಂಡಿ ಬಸವಣ್ಣ, ಸುರೇಶ್‌ನಾಗ್, ನಿಂಗಶೆಟ್ಟಿ, ಸುಬ್ಬಶೆಟ್ಟಿ, ಬಂಡೀಗೆರೆ ಶಿವಸ್ವಾಮಿ, ಶಿವಲಿಂಗ ಮೂರ್ತಿ, ವರದರಾಜು, ಭೋಗಪುರ ಮಲ್ಲಿಕಾರ್ಜುನ, ಪುರುಷೋತ್ತಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

**

ಬಿಇಎಂಎಲ್‌ ಸೇರಿದಂತೆ ಕೇಂದ್ರದ ಸ್ವಾಮ್ಯದಲ್ಲಿರುವ ಕಾರ್ಖಾನೆಗಳನ್ನು ಮತ್ತು ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಸರ್ಕಾರದ ಉದ್ದೇಶ ಖಂಡನೀಯ

-ವಾಟಾಳ್ ನಾಗರಾಜ್‌,

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry