ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿಯಾಗುತ್ತಿದೆ ರಕ್ಕಸಕೊಪ್ಪ ಜಲಾಶಯ

Last Updated 5 ಜೂನ್ 2017, 8:35 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ತಾಲ್ಲೂಕಿನ ರಕ್ಕಸ ಕೊಪ್ಪ ಜಲಾಶಯ ಬರಿದಾಗುತ್ತಿದೆ. ಇನ್ನೊಂದು ವಾರ ಮುಂಗಾರು ಮಳೆ ವಿಳಂಬವಾದರೆ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿಯಲಿದೆ. ತಳಮಟ್ಟದಲ್ಲಿರುವ ‘ಡೆಡ್‌ಸ್ಟೋರೇಜ್‌’ ನೀರನ್ನು ಬಳಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಲಿದೆ.

ಜಲಾಶಯದಿಂದ ನೀರೆತ್ತುವ ಪಂಪ್‌ಗೆ ನಾಲ್ಕು ದಿನಗಳಿಂದ ಕಡಿಮೆ ಪ್ರಮಾಣದಲ್ಲಿ ನೀರು ದೊರೆಯುತ್ತಿದೆ. ಹಿಂಡಲಗಾ ಪಂಪ್‌ಹೌಸ್‌ನಲ್ಲಿನ 600 ಎಚ್‌ಪಿ ಸಾಮರ್ಥ್ಯದ 2 ವಿದ್ಯುತ್‌ ಮೋಟಾರ್‌ಗಳ ಶಕ್ತಿಗೆ ಬೇಕಾಗುವಷ್ಟು ನೀರು ಲಭಿಸುತ್ತಿಲ್ಲ. ಪಂಪ್‌ಸೆಟ್‌ನ ಫುಟ್‌ಬಾಲ್‌ ಬಳಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ನಿತ್ಯ ನಿರೀಕ್ಷೆಯಷ್ಟು ನೀರೆತ್ತಲು ಆಗುತ್ತಿಲ್ಲ. ಮುಂಗಾರು ಆರಂಭವಾದರೆ ಪರಿಸ್ಥಿತಿ ಸುಧಾರಿ ಸಲಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.

ಜಲಾಶಯದಲ್ಲಿ ಈಗ ಕೇವಲ 1.9 ಅಡಿ ನೀರು ಮಾತ್ರ ಉಳಿದಿದೆ. ಈಗ 0.25 ಅಡಿ ನೀರೆತ್ತಲಾಗುತ್ತಿದೆ. ನಿತ್ಯ ಇದೇ ಪ್ರಮಾಣದಲ್ಲಿ ನೀರೆತ್ತಿದರೆ ಒಂದು ವಾರದಲ್ಲಿ ಜಲಾಶಯ ಖಾಲಿಯಾಗಲಿದೆ. ನಂತರ ಡೆಡ್‌ ಸ್ಟೋರೇಜ್‌ ನಲ್ಲಿರುವ ನೀರನ್ನೇ ಪಂಪ್‌ ಮಾಡಲು ಹರಸಾಹಸ ಪಡಬೇಕಾಗುತ್ತದೆ.

2476.25 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಜಲಾಶಯದ ನೀರಿನಮಟ್ಟ ಭಾನುವಾರ ಬೆಳಿಗ್ಗೆ 2449.25 ಅಡಿಗಳಷ್ಟಿತ್ತು. ಹೋದ ವರ್ಷಕ್ಕೆ ಹೋಲಿಸಿದರೆ 3 ಅಡಿಗಳಷ್ಟು ನೀರಿನ ಪ್ರಮಾಣ ಜಾಸ್ತಿಯೇ ಇದೆ.

ವಿಳಂಬದಿಂದ ಆತಂಕ: ಮುಂಗಾರು ಪೂರ್ವ ಮಳೆಯಿಂದ ಜಲಾಶಯಕ್ಕೆ ಒಂದಿಷ್ಟು ನೀರು ಬಂದು ಸೇರುತ್ತಿತ್ತು. ಜಲಾಶಯದ ಜಲಾನಯನ ಪ್ರದೇಶದ ಸಣ್ಣಪುಟ್ಟ ಹಳ್ಳಗಳು ಜೀವ ಪಡೆಯುತ್ತಿದ್ದವು. ಜೂನ್‌ ಮೊದಲ ವಾರದಲ್ಲಿ ಜಲಾಶಯದ ನೀರಿನ ಮಟ್ಟ ಸುಧಾರಿಸುತ್ತಿತ್ತು. ಆದರೆ, ಈ ಬಾರಿ ಜೂನ್‌ ಮೊದಲ ವಾರವಾದರೂ ಮುಂಗಾರು ಆರಂಭವಾಗಿಲ್ಲ.

ಮಳೆಯ ಸೂಚನೆ ಇಲ್ಲದಿರುವುದ ರಿಂದ ಮುಂದಿನ ದಿನಗಳಲ್ಲಿ ಜಲಾಶಯ ದಲ್ಲಿ ನೀರು ಕೊರತೆಯಾಗುವ ಸೂಚನೆಗಳು ಇವೆ. ರೈತರಿಗೆ ಅತ್ಯಂತ ಭರವಸೆಯ ಮಳೆ ಎಂದೇ ಕರೆಯುವ ರೋಹಣಿ ಮಳೆಯೂ ಮುಕ್ತಾಯದ ಹಂತಕ್ಕೆ ಬಂದರೂ ಮುಂಗಾರು ಪ್ರವೇಶವಾಗಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ.

ಆತಂಕಪಡುವ ಅಗತ್ಯವಿಲ್ಲ: ನಗರಕ್ಕೆ ಹಿಡಕಲ್‌ ಹಾಗೂ ರಕ್ಕಸಕೊಪ್ಪ ಜಲಾ ಶಯದಿಂದ ನೀರು ಪೂರೈಸಲಾಗುತ್ತದೆ. ರಕ್ಕಸಕೊಪ್ಪದಲ್ಲಿ ಕೊರತೆ ಇರುವುದ ರಿಂದ, ಹಿಡಕಲ್‌ ಜಲಾಶಯದ ನೀರಿಗೆ ಅವಲಂಬನೆ ಹೆಚ್ಚಾಗಿದೆ.

‘ರಕ್ಕಸಕೊಪ್ಪ ಜಲಾಶಯದಲ್ಲಿ ಇನ್ನೂ ಎರಡು ಅಡಿ ನೀರಿದೆ. ಆದರೆ, ಪಂಪ್‌ಸೆಟ್‌ಗೆ ಬೇಕಾದ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಇದರಿಂದ ನೀರು ಪೂರೈಕೆಯಲ್ಲಿ ಸ್ವಲ್ಪ ಅಡಚಣೆಯಾಗಿದೆ. ವಾರ ಬೆಡ್‌ ಲೆವಲ್‌ ಮೇಲಿನ ಹಾಗೂ ಅನಂತರ ಕೆಲ ದಿನ ಬೆಡ್‌ ಕೆಳಗಿನ ನೀರನ್ನು ಸಣ್ಣ ಪ್ರಮಾಣದಲ್ಲಿ ಪಡೆಯಬಹುದು.

ಅಷ್ಟರೊಳಗೆ ಮುಂಗಾರು ಆರಂಭವಾಗುವ ಸೂಚನೆಗಳಿವೆ. ಇಲ್ಲಿಯ ನೀರಿನ ಕೊರತೆಯನ್ನು ಹಿಡಕಲ್‌ ಜಲಾಶಯದಿಂದ ದೊರೆಯುವ ನೀರಿನಿಂದ ನೀಗಿಸಲಾಗು ವುದು. ಜನರು ಆತಂಕಪಡುವ ಅಗತ್ಯ ಇಲ್ಲ. ನೀರನ್ನು ಹಿತಮಿತವಾಗಿ ಬಳಸಬೇಕು’ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎನ್‌. ಪ್ರಸನ್ನಮೂರ್ತಿ ತಿಳಿಸಿದರು.

* * 

ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮುಂಗಾರು ಮಳೆ ಶುರುವಾದರೆ ನೀರಿಗೆ ತೊಂದರೆಯಾಗುವುದಿಲ್ಲ.
ಎನ್‌. ಪ್ರಸನ್ನಮೂರ್ತಿ
ಕಾರ್ಯಪಾಲಕ ಎಂಜಿನಿಯರ್‌

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT