ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ವೃಕ್ಷ ಅಭಿಯಾನಕ್ಕೆ 10 ಲಕ್ಷ ಸಸಿ

Last Updated 5 ಜೂನ್ 2017, 9:16 IST
ಅಕ್ಷರ ಗಾತ್ರ

ಆಲಮಟ್ಟಿ (ನಿಡಗುಂದಿ): ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಮಹತ್ವಾಕಾಂಕ್ಷಿಯ ಕೋಟಿ ವೃಕ್ಷ ಅಭಿಯಾನ ಯೋಜನೆಗಾಗಿ  ಅಗತ್ಯ ವಿರುವ 10 ಲಕ್ಷ ಸಸಿ ಬೆಳೆಸುವ ಕಾರ್ಯ ಆಲಮಟ್ಟಿಯಲ್ಲಿ ನಡೆದಿದ್ದು, ಈ ತಿಂಗಳು ಜಿಲ್ಲೆಯಾದ್ಯಂತ ವಿತರಣೆಗೆ ಸಜ್ಜಾಗಲಿವೆ.

ಅರಣ್ಯ ಇಲಾಖೆಯ ಸಸಿಗಳೆಂದರೆ ಕೇವಲ ಬೇವು, ಆಲ ಎಂದು ಮೂಗಿ ಮುರಿಯುವ ಹಾಗಿಲ್ಲ. ಈ ಬಾರಿ ವಿವಿಧ ಜಾತಿಯ ಹಣ್ಣು, ಹೂವು, ತೋಟ ಗಾರಿಕೆ, ವಾಣಿಜ್ಯ ಸಸಿಗಳು ಸೇರಿದಂತೆ ವಿವಿಧ 147 ತಳಿಗಳ ಸಸಿಗಳನ್ನು ಆಲ ಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆಸಲಾಗಿದೆ.

ಈ ಬಾರಿ ಮುಂಗಾರು ಆರಂಭವಾ ದೊಡನೆ ವಿತರಣೆಗೆ ಇಲಾಖೆ ಸಿದ್ಧತೆ ನಡೆಸಿದೆ. ಕೋಟಿ ವೃಕ್ಷ ಅಭಿಯಾನದಡಿ ಈ ವರ್ಷ 25 ಲಕ್ಷ ಸಸಿಗಳ ಉತ್ಪಾ ದನೆಯ ಗುರಿ ಹೊಂದಿದ್ದು, ಅದರಲ್ಲಿ 10 ಲಕ್ಷ ಸಸಿಗಳನ್ನು ಆಲಮಟ್ಟಿಯ ನರ್ಸರಿಯಲ್ಲಿ ಬೆಳೆಸಲಾಗುತ್ತಿದೆ ಎಂದು ಆರ್‌ಎಫ್‌ಓ ಮಹೇಶ ಪಾಟೀಲ ತಿಳಿಸಿದರು.

ರೋಗಾಣು ರಹಿತ, ಉತ್ತಮ ತಳಿಯ ಸಸಿಗಳ ಉತ್ಪಾದನೆಗೆ ಆದ್ಯತೆ ನೀಡಿದ್ದು, ಅದಕ್ಕಾಗಿ ಸುಮಾರು 600 ಕ್ಕೂ ಹೆಚ್ಚು ದಿನಗೂಲಿಗಳು ಕಳೆದ ಐದು ತಿಂಗಳಿಂದ ಇಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ.  ಆಲಮಟ್ಟಿಯ ಮೂರು ವಿವಿಧ ಸ್ಥಳಗಳಲ್ಲಿ ಸುಮಾರು 100 ಎಕರೆ ವಿಸ್ತಾರದಲ್ಲಿ ಈ ಸಸಿ ಉತ್ಪಾದನೆ ಕಾರ್ಯ ನಡೆದಿದೆ.

ಎಲ್ಲಿಂದ ತರಿಸಲಾಗಿದೆ?: ಬೇವು, ಸೇರಿ ದಂತೆ ಕೆಲ ಜಾತಿಯ ಸಸಿಗಳನ್ನು ಇಲ್ಲಿಯೇ ಉತ್ಪಾದಿಸಲಾಗಿದ್ದು, ಅಪರೂ ಪದ ಸಸ್ಯ ಸಂಕುಲಗಳನ್ನು ಕರ್ನಾಟಕ, ಸೀಮಾಂಧ್ರ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಯಿಂದ ಸಸಿಗಳನ್ನು ತರಿಸ ಲಾಗಿದ್ದು, ಅವುಗಳನ್ನು ಕಳೆದ ನಾಲ್ಕು ತಿಂಗಳಿಂದ ಇಲ್ಲಿ ಪೋಷಿಸಲಾಗುತ್ತಿದೆ ಎಂದು ಮಹೇಶ ಪಾಟೀಲ ತಿಳಿಸಿದರು.

ತೋಟಗಾರಿಕೆ, ವಾಣಿಜ್ಯ, ಅಲಂಕಾರಿಕ ಸೇರಿದಂತೆ ವಿವಿಧ ತಳಿಯ ಸಸಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದ್ದು, ಮನೆಯ ಉದ್ಯಾನ, ಬೀಳು, ಜೌಗು, ಸವುಳು ಹಿಡಿದ ಭೂಮಿಯಲ್ಲಿಯೂ ಬೆಳೆಯುವ ಸಸಿಗಳು ಕೂಡಾ  ಇಲ್ಲಿವೆ.

ಪ್ರಮುಖ ಸಸಿಗಳು: ತೆಂಗು, ಬೇವು, ಹುಣಸೆ, ವಿವಿಧ ತಳಿಯ ಮಾವು, ನುಗ್ಗೆ, ನೆಲ್ಲಿ, ಬದಾಮ, ಬೇವು, ಹುಣಸೆ, ಶ್ರೀಗಂಧ, ಹೆಬ್ಬೇವು, ಸಾಗವಾನಿ, ಸೀತಾ ಫಳ, ರಾಮಫಲ, ರಕ್ತ ಚಂದನ, ಹೊಂಗೆ, ಅಶೋಕ, ನಾಗಸಂಪಿಗೆ, ಪೇರಲ, ನೇರಳೆ, ಲಿಂಬೆ, ಮೋಸಂಬಿ, ಕರಿಬೇವು, ಬಾರಿ, ಗಾಳಿಮರ, ಚಿಕ್ಕು, ಪತ್ರಿ, ಬನ್ನಿ, ಭದ್ರಾಕ್ಷಿ, ಸಂಪಿಕೆ, ಗುಲಾಬಿ, ಸಿಹಿ ಹುಣಸೆ, ಅಂಜೂರ, ನಾಗಲಿಂಗ ಪುಷ್ಪ, ಹಲಸು, ಚೆರ್ರಿ, ಪಾರಿಜಾತ, ಆಕಾಶ ಮಲ್ಲಿಗೆ, ಕ್ಯಾದಗಿ, ಗೇರು, ಕದಂಬ, ಧೂಪ, ಸಂಕೇಶ್ವರ, ಬೋಗನ್ವಿಲ್ಲಾ, ರಾತಕಿ ರಾಣಿ, ದಾಸವಾಳ, ವಿವಿಧ ಜಾತಿಯ ಪಾಮ್ ಸಸಿಗಳು, ಲಕ್ಷ್ಮಣ ಫಲ, ದಾಳಿಂಬೆ, ಕಾಮಕಸ್ತೂರಿ, ಕಿತ್ತಳೆ ಸೇರಿದಂತೆ ಒಟ್ಟು 147 ವಿವಿಧ ತಳಿಗಳ 10 ಲಕ್ಷ ಸಸಿಗಳು ಇಲ್ಲಿವೆ.

600 ಕ್ಕೂ ಹೆಚ್ಚು ದಿನಗೂಲಿಗಳು: ಕೇವಲ ಐದೇ ತಿಂಗಳಲ್ಲಿ 10 ಲಕ್ಷ ಸಸಿಗಳ ಉತ್ಪಾದನೆ ಎಂದರೆ ಸಾಮಾನ್ಯ  ವಿಷಯವಲ್ಲ, ಅದಕ್ಕಾಗಿ ಅರಣ್ಯ ಇಲಾಖೆಯ ಡಿಎಫ್‌ಓ ಎಸ್‌.ಕೆ. ಪವಾರ, ಎ.ಸಿ.ಎಫ್‌ ಆನಂದ ಹುದ್ದಾರ ಹಾಗೂ ಆರ್‌ಎಫ್‌ಓ ಮಹೇಶ ಪಾಟೀಲ ಮಾರ್ಗದರ್ಶನದಲ್ಲಿ ಸುಮಾರು 600 ಕ್ಕೂ ಹೆಚ್ಚು ದಿನಗೂಲಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

* *

ಇದೇ ತಿಂಗಳ ಅಂತ್ಯದಲ್ಲಿ ಸಸಿಗಳ ವಿತರಣೆ ನಡೆಯಲಿದೆ. ತಮಗೆ ಅಗತ್ಯವಿರುವ ಸಸಿಗಳನ್ನು ಇಲ್ಲಿಯೇ ಬಂದು ಒಯ್ಯಬೇಕು, ಮೊದಲು ಬಂದವರಿಗೆ ಮೊದಲ ಆದ್ಯತೆ
ಮಹೇಶ ಪಾಟೀಲ
ಆರ್‌ಎಫ್‌ಓ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT